ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 25 OCTOBER 2024 : ಹಣಗೆರೆ ವನ್ಯಜೀವಿ ವಲಯ ಸಿರಿಗೆರೆ ವ್ಯಾಪ್ತಿಯಲ್ಲಿ ನಡೆದಿದ್ದ ಶ್ರೀಗಂಧ (Sandal) ಮರಗಳ ಕಡಿತಲೆಗೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ಸಿರಿಗೆರೆ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಅರನಲ್ಲಿ ಗ್ರಾಮದ ವಿಜಯಕುಮಾರ್ ಬಂಧಿತ ಆರೋಪಿ. ಕಳೆದೆರಡು ತಿಂಗಳಿಂದ ತಲೆಮರೆಸಿಕೊಂಡಿದ್ದ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗುರುವಾರ ಬೆಳಗಿನಜಾವ ಹೊಸನಗರ ತಾಲೂಕು ಹೆಬ್ಬಲು ಗ್ರಾಮದಲ್ಲಿ ಉಮೇಶ್ ಎಂಬುವರ ಮನೆ ಮೇಲೆ ದಾಳಿ ಮಾಡಿ ವಿಜಯಕುಮಾರ್ ನನ್ನು ಬಂಧಿಸಲಾಗಿದೆ. ಈ ಹಿಂದೆ ಇದೇ ಗ್ರಾಮದ ಮಂಜುನಾಥನನ್ನು ಬಂಧಿಸಲಾಗಿತ್ತು. ಇದರೊಂದಿಗೆ ಇಬ್ಬರನ್ನು ಬಂಧಿಸಿದಂತಾಗಿದೆ. ಎರಡನೇ ಆರೋಪಿ ರಾಮಕೃಷ್ಣ ನಾಪತ್ತೆಯಾಗಿದ್ದಾನೆ.
ಇದನ್ನೂ ಓದಿ » ಶಿವಮೊಗ್ಗಕ್ಕೆ ನಾಳೆ ಹೋಮ್ ಮಿನಿಸ್ಟರ್, ಎಲ್ಲಿಗೆಲ್ಲ ಭೇಟಿ ನೀಡ್ತಾರೆ?
ಕಳೆದ ಸೆ.5ರಂದು ಮಂಜುನಾಥ, ರಾಮಕೃಷ್ಣ ಮತ್ತು ವಿಜಯಕುಮಾರ್ ಸಿರಿಗೆರೆ ವ್ಯಾಪ್ತಿಯಲ್ಲಿ ಶ್ರೀಗಂಧದ ಮರ ಕಡಿತಲೆ ಮಾಡಿದ್ದರು. ವಲಯ ಅರಣ್ಯ ಅಧಿಕಾರಿ ಪಿ.ಅರವಿಂದ್ ನೇತೃತ್ವದಲ್ಲಿ ಡಿವೈಆರ್‌ಎಫ್‌ಒ ಶಿವಕುಮಾರ್ ಸುರವನ್ನೆ, ಸಿಬ್ಬಂದಿ ಕುಮಾರ್ ನಾಯ್ಸ್, ಕೊಟ್ರೇಶ್ ದಾನಮ್ಮನವರ್, ಜೆ.ಬಸವರಾಜ, ಲಕ್ಷ್ಮಣ್ ಇಬ್ರಾಹಿಂಪುರ್, ಡಿ.ಶಿವರಾಜ್ ಮತ್ತು ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.