ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಸ್ಥಳೀಯ ಮುಳುಗು ತಜ್ಞ ಪ್ರಮೋದ್ ಕಾರ್ಯಾಚರಣೆ (search operation) ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ.
ಸೀಬನಕೆರೆ ನಿವಾಸಿ ಅಕ್ಷಯ್ (26) ಮೃತ. ಮಂಗಳವಾರ ಪಟ್ಟಣ ಸಮೀಪ ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಸಂದರ್ಭ ಅಕ್ಷಯ್ ನಾಪತ್ತೆಯಾಗಿದ್ದ. ಆತನ ಬಟ್ಟೆ, ಮೊಬೈಲ್ ಹಾಗೂ ಒಂದು ₹1000 ನಗದು ನದಿ ದಂಡೆಯಲ್ಲಿ ದೊರೆತಿತ್ತು.

ವಿಷಯ ತಿಳಿದ ಪೋಲಿಸರು, ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರು ಸಂಜೆಯವರೆಗೆ ಹುಡುಕಾಟ ನಡೆಸಿದ್ದರು. ಸಂಜೆ 4 ಗಂಟೆಗೆ ಮೂವರು ಸ್ನಾನಕ್ಕೆಂದು ಬಂದಿದ್ದನ್ನು ಸ್ಥಳದಲ್ಲಿದ್ದವರು ಗಮನಿಸಿದ್ದರು ಎನ್ನಲಾಗಿದೆ. ಈಗ ಅಕ್ಷಯ್ನ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ : IPL ಟಿಕೆಟ್ ವಿಚಾರ, ಸಭಾಧ್ಯಕ್ಷರಿಗೆ ಪತ್ರ ಬರೆದ ಶಿವಮೊಗ್ಗ MLA, ಏನಿದೆ ಪತ್ರದಲ್ಲಿ?

LATEST NEWS
- Three killed, several injured in soil cave-in at Hulikal Ghat

- BREAKING NEWS – ಹುಲಿಕಲ್ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

- PU RESULT: ಶಿವಮೊಗ್ಗದ ಮಹೀನ್ ಖಾನಮ್ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

- ಇವತ್ತಿನ ಅಡಿಕೆ ರೇಟ್, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

- ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

About The Editor
ನಿತಿನ್ ಆರ್.ಕೈದೊಟ್ಲು











