ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI | 28 ಡಿಸೆಂಬರ್ 2019
ಎಳ್ಳಮವಾಸ್ಯೆ ಅಂಗವಾಗಿ ಪ್ರಥಮ ಬಾರಿಗೆ ಜೀವನದಿ ತುಂಗೆಗೆ ಇವತ್ತು ಸಂಜೆ ತುಂಗಾರತಿ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದೇ ವೇಳೆ ನಡೆಯುವ ಶ್ರೀ ರಾಮೇಶ್ವರ ದೇವರ ತೆಪ್ಪೋತ್ಸವದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ನಟ ವಿಜಯ್ ರಾಘವೇಂದ್ರ, ತೆಲುಗು ನಟ ವಿಜಯ್ ಇತರರು ನಾಡಿನಾದ್ಯಂತ ಬಂದು ಸೇರುವ ಜನರ ನಡುವೆಯೇ ಕುಳಿತು ಈ ಸಂಭ್ರಮವನ್ನು ಕಣ್ಣುಂಬಿಕೊಳ್ಳಲಿದ್ದಾರೆ.
70ರ ದಶಕದಲ್ಲಿ ಆರಂಭಗೊಂಡಿರುವ ತೆಪ್ಪೋತ್ಸವ ಕಳೆದ ನಾಲ್ಕೂವರೆ ದಶಕಗಳಿಂದ ಧಾರ್ಮಿಕತೆಯೊಂದಿಗೆ ಸಾಂಸ್ಕೃತಿಕವಾಗಿಯೂ ನಾಡಿನಲ್ಲಿ ಮನೆ ಮಾತಾಗಿದೆ. ಇದೇ ಮೊದಲ ಬಾರಿಗೆ ರಾಜ್ಯ ಸಿಎಂ ಒಬ್ಬರು ಇದರಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ. ಈ ಕಾರ್ಯಕ್ರಮದ ಅಂಗವಾಗಿ ತುಂಗಾನದಿಯ ಇಕ್ಕೆಲ ಹಾಗೂ ಜಯಚಾಮರಾಜ ತೂಗು ಸೇತುವೆ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದೆ. ನದಿದಡದಲ್ಲಿ ಕೂರಲು ಸೂಕ್ತ ವ್ಯವಸ್ಥೆಯನ್ನೂ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]