ಶಿವಮೊಗ್ಗ ಲೈವ್
ತೀರ್ಥಹಳ್ಳಿ: ದಬ್ಬಣಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಗಿಲಿನ ಬೀಗ ಒಡೆದು ಕಳವಿಗೆ ಯತ್ನಿಸಲಾಗಿದೆ. ಇದು ಏಕೋಪಾಧ್ಯಾಯ ಶಾಲೆಯಾಗಿದ್ದು, ಶಿಕ್ಷಕ ಆರೋಗ್ಯ ಸಮಸ್ಯೆಯಿಂದಾಗಿ ಕೆಲ ದಿನಗಳಿಂದ ಬಂದಿಲ್ಲ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳನ್ನು ಸಮೀಪದ ಮತ್ತೊಂದು ಶಾಲೆಗೆ ಕರೆದೊಯ್ದು ತರಗತಿ ನಡೆಸಲಾಗುತ್ತಿದೆ. (ಈ ಸುದ್ದಿಯನ್ನು ಇನ್ನು 21 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಇದನ್ನು ತಿಳಿದ ದುಷ್ಕರ್ಮಿಗಳು ತಡರಾತ್ರಿ ಶಾಲೆಯ ಕಂಪ್ಯೂಟರ್, ಡಿಜಿಟಲ್ ಉಪಕರಣಗಳನ್ನು ಹೊತ್ತೊಯ್ಯುವ ಯತ್ನ ನಡೆಸಿದ್ದು, ಶಾಲಾ ದಾಖಲೆಗಳನ್ನು ಪರಿಶೀಲಿಸಿರುವ ಆರೋಪಗಳೂ ಕೇಳಿ ಬಂದಿವೆ. ಮಾಳೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
