SHIVAMOGGA LIVE NEWS | 2 DECEMBER 2024
ತೀರ್ಥಹಳ್ಳಿ : ದೇವಸ್ಥಾನವೊಂದರ (Temple) ಬಾಗಿಲಿನ ಬೀಗ ಮುರಿದು ಹುಂಡಿಯಲ್ಲಿದ್ದ ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕು ಮುಂಡುವಳ್ಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ.
ಅರ್ಚಕ ಪ್ರಶಾಂತ್ ಅಡಿಗ ರಾತ್ರಿ ಪೂಜೆ ಮುಗಿಸಿ ದೇವಸ್ಥಾನದ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ದೇಗುಲದ ಬಳಿ ಆಗಮಿಸಿದಾಗ ದೇಗುಲದ ಮುಂದಿನ ಬಾಗಿಲಿನ ಬೀಗ ಮುರಿದಿತ್ತು. ಒಳಗೆ ಹುಂಡಿಯ ಬೀಗವನ್ನು ಒಡೆಯಲಾಗಿತ್ತು. ಅದರಲ್ಲಿದ್ದ ಸುಮಾರು 15 ಸಾವಿರ ರೂ. ಕಾಣಿಕ ಹಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ದೇವಸ್ಥಾನ ಅಧ್ಯಕ್ಷ ಅನಂತ ಪದ್ಮನಾಭ ಭಟ್ ಅವರು ಮಾಳೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಭದ್ರಾ ಡ್ಯಾಮ್, ನಾಲೆಯ ಗೇಟ್ ಬಂದ್ ಮಾಡುವಾಗ ಕ್ರೇನ್‌ನ ಕೇಬಲ್ ಕಟ್