ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 17 ಮೇ 2020
ಆ ಡ್ರೈವರ್ ಒಬ್ಬನಿಗೆ ಪಾಸಿಟಿವ್ ಬಾರದಿರಲಿ ಅಂತಾ ಕೊಲ್ಲೂರು ದೇವಿಯಲ್ಲಿ ಪ್ರಾರ್ಥನೆ ಮಾಡ್ತೇನೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೀಗಂತ ಹೇಳಿದ್ದಾರೆ.
ತೀರ್ಥಹಳ್ಳಿ ತಾಲೂಕಿನಾದ್ಯಂತ ಬಹುತೇಕ ಎಲ್ಲರದ್ದು ಇದೇ ಅಭಿಪ್ರಾಯ. ‘ಆ ಚಾಲಕ ಊರಿನ ಸುತ್ತಮುತ್ತ 50 ಕಿ.ಮೀ ರೇಡಿಯಸ್ನಲ್ಲಿ ಹಲವು ಕಡೆಗೆ ಓಡಾಡಿದ್ದಾನೆ. ಹಲವರನ್ನು ಭೇಟಯಾಗಿದ್ದಾನೆ. ಮದುವೆಗು ಹೋಗಿದ್ದಾನೆ. ಕ್ರಿಕೆಟ್ ಆಡಿದ್ದಾನೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಅತಂಕದಿಂದಲೆ ಮಾಧ್ಯಮಗಳಿಗೆ ತಿಳಿಸಿದರು.
ಯಾರು ಈ ಚಾಲಕ? ಆತನ ಬಗ್ಗೆ ಆತಂಕವೇಕೆ?
ಮುಂಬೈನಿಂದ ತೀರ್ಥಹಳ್ಳಿಗೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಅವರನ್ನು ಪೇಷಂಟನ್ ನಂಬರ್ 995 ಎಂದು ಗುರುತಿಸಲಾಗಿದೆ. ಅವರ ಜೊತೆಗೆ ಆಟೋ ಚಾಲಕ ಸಂಪರ್ಕ ಹೊಂದಿದ್ದ. ಪಿ995ನ ಟ್ರಾವಲ್ ಹಿಸ್ಟರಿಯಲ್ಲಿ ಇದು ದೃಢಪಟ್ಟಿದೆ.
ಊರೆಲ್ಲ ಸುತ್ತಿದ್ದಾನೆ ಚಾಲಕ
ಸೋಂಕಿತನ ಟ್ರಾವಲ್ ಹಿಸ್ಟರಿ ಪ್ರಕಾರ, ಆಟೋ ಚಾಲಕನೊಬ್ಬನ ಜೊತೆಗೆ ಸಂಪರ್ಕವಿತ್ತು. ಆ ಆಟೋ ಚಾಲಕ ಈಗ ತೀರ್ಥಹಳ್ಳಿಯ ವಿವಿಧಡೆ ಓಡಾಡಿದ್ದಾನೆ. ಇದು ಈಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಈತನ ರಿಪೋರ್ಟ್ಗಾಗಿ ಇಡೀ ತಾಲೂಕು ಕಾದು ಕೂತಿದೆ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422