ತೀರ್ಥಹಳ್ಳಿ ಪೊಲೀಸರ ಕಾರ್ಯಾಚರಣೆ, ಶಿವಮೊಗ್ಗದ ಟಿಪ್ಪುನಗರ, ಅಣ್ಣಾನಗರದ ಇಬ್ಬರು ಅರೆಸ್ಟ್‌, ಏನಿದು ಕೇಸ್‌?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ತೀರ್ಥಹಳ್ಳಿ: ತಾಲೂಕಿನ ಗಡಿಕಲ್ ಗ್ರಾಮದಲ್ಲಿ ತಡರಾತ್ರಿ ಗೋವುಗಳ ಕಳವಿಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದ ಟಿಪ್ಪುನಗರ ನಿವಾಸಿ ರೋಷನ್ ಬೇಗ್ (31) ಮತ್ತು ಅಣ್ಣಾನಗರ ನಿವಾಸಿ ಇಮ್ರಾನ್ (39) ಬಂಧಿತರು ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಅಂದಾಜು ₹4 ಲಕ್ಷ ಮೌಲ್ಯದ ಎರ್ಟಿಗಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Cow-Theft-Attempt-at-Gadikal-in-Thirthahalli

ಡಿವೈಎಸ್ಪಿ ಅರವಿಂದ್ ಕಲಗುಜ್ಜಿ, ಇನ್‌ಸ್ಪೆಕ್ಟರ್ ಇಮ್ರಾನ್ ಬೇಗ್, ಪಿಎಸ್‌ಐಗಳಾದ ಸುಷ್ಮಾ ಆರ್., ಯುವರಾಜ್ ಹಾಗೂ ಸಿಬ್ಬಂದಿ ಲಿಂಗೇಗೌಡ, ಕುಮಾರ, ಪ್ರಸನ್ನ, ದೀಪಕ್, ಪ್ರದೀಪ ಕೆ.ಪಿ., ಮಂಜುನಾಥ್ ಹಂಪಿಹೊಳಿ ಮತ್ತು ಪ್ರಮೋದ್ ಜೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.