ಕುಡಿಯುವ ನೀರಿನ ಬಾವಿಗೆ ವಿಷ, ದಾಖಲಾಯ್ತು ಪ್ರಕರಣ

ತೀರ್ಥಹಳ್ಳಿ: ತಾಲೂಕಿನ ಗಿಣಿಯ ಗ್ರಾಮದಲ್ಲಿ ಹಳೆಯ ದ್ವೇಷದ ಹಿನ್ನೆಲೆ ಕುಡಿಯುವ ನೀರಿನ (water) ಬಾವಿಗೆ ವಿಷ ಬೆರೆಸಿರುವ ಘಟನೆ ನಡೆದಿದೆ. ಗ್ರಾಮದ ನಿವಾಸಿ ರಾಘವೇಂದ್ರ ಎಂಬುವವರ ಜಮೀನಿನ ಬಾವಿಗೆ ವಿಷ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಮಂಗಳವಾರ ಸಂಜೆ ರಾಘವೇಂದ್ರ ಅವರು ಬಾವಿಯ ಬಳಿ ಹೋಗಿದ್ದಾಗ, ನೀರಿನಲ್ಲಿ ವಿಷದ ವಾಸನೆ ಬರುತ್ತಿರುವುದು ಪತ್ತೆಯಾಗಿದೆ. ಜಮೀನು ವಿವಾದದ ಹಿನ್ನೆಲೆ ವಿಷ ಬೆರೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga-Police-Jeep

ಇದನ್ನೂ ಓದಿ : ಐದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್‌, ಜೈಲಿಗೆ

Leave a Comment