ಆಗುಂಬೆ ಸುತ್ತಮುತ್ತ ಸಂಜೆ 6 ಗಂಟೆ ನಂತರ ಓಡಾಡುವಾಗ ಎಚ್ಚರ, ಕಾರಣವೇನು?

ತೀರ್ಥಹಳ್ಳಿ: ಕಳೆದ ಕೆಲ ದಿನದಿಂದ ಆಗುಂಬೆ ಮತ್ತು ಬಿದರಗೋಡು ವ್ಯಾಪ್ತಿಯಲ್ಲಿ ಕಾಡಾನೆ (Elephant) ಸಂಚರಿಸುತ್ತಿದೆ. ಹಾಗಾಗಿ ಈ ಗ್ರಾಪಂಗಳ ವ್ಯಾಪ್ತಿಯಲ್ಲಿ ಸಂಜೆ ನಂತರ ಕಾಲ್ನಡಿಗೆಯಲ್ಲಿ ಸಂಚರಿಸಬಾರದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಬಿದರಗೋಡು ಗ್ರಾಮ ಪಂಚಾಯಿತಿಯ ಅಗಸರಕೋಣೆ, ಕಾರೇಕುಂಬಿ, ಜಡ್ಡು, ಮಳಲಿ, ತಲ್ಲೂರು, ಆಗುಂಬೆ ಗ್ರಾಪಂ ವ್ಯಾಪ್ತಿಯ ಉಳುಮಡಿ ಮತ್ತು ಸುತ್ತಲಿನ ಜಾಗದಲ್ಲಿ ಸಂಚರಿಸುತ್ತಿದೆ. ಸಂಜೆ 6 ಗಂಟೆ ನಂತರ ಮನೆಯಿಂದ ಹೊರಗೆ ಹೋಗದಿರುವುದು ಸೂಕ್ತ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಎಚ್ಚರವಹಿಸಬೇಕು ಎಂದು ಆಗುಂಬೆ ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Wild-Elephant-near-agumbe-in-Thirthahalli.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಹೆಚ್ಚಳ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟೆಷ್ಟಿರುತ್ತೆ ತಾಪಮಾನ?

Elephant at Agumbe

Leave a Comment