ಶಿವಮೊಗ್ಗ ಲೈವ್
ತೀರ್ಥಹಳ್ಳಿ: ಕೌಟುಂಬಿಕ ಕಲಹದಿಂದ ಬೇಸತ್ತು ವಿಷ ಸೇವಿಸಿದ್ದ ತೀರ್ಥಹಳ್ಳಿ ತಾಲ್ಲೂಕಿನ ಮಹಿಳೆ ಶಿವಮೊಗ್ಗದಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಾಲ್ಲೂಕಿನ ಹೊದಲ ಗ್ರಾಮದ ನಿವಾಸಿ ಅಕ್ಷತಾ ಮೃತ ಗೃಹಿಣಿ. (ಈ ಸುದ್ದಿಯನ್ನು ಇನ್ನು 25 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಹೊಸನಗರ ತಾಲೂಕಿನ ಭೈರಗುಂದ ಗ್ರಾಮದ ಅಕ್ಷತಾರನ್ನು ಎಂಟು ವರ್ಷಗಳ ಹಿಂದೆ ಹೊದಲ ಗ್ರಾಮದ ಪುರುಷೋತ್ತಮ್ಗೆ ವಿವಾಹ ಮಾಡಿಕೊಡಲಾಗಿತ್ತು. ಅ.13ರಂದು ಕೌಟುಂಬಿಕ ಕಲಹದಿಂದ ಅಕ್ಷತಾ ವಿಷಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಕ್ಷತಾ ಅವರ ತಾಯಿ ಮೀನಾಕ್ಷಿ ದೂರಿನ ಆಧಾರದಲ್ಲಿ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
