SHIVAMOGGA LIVE NEWS | 18 AUGUST 2023
KUMSI : ಹಳಿ ದಾಟುತ್ತಿದ್ದ ಎಮ್ಮೆಯೊಂದು ರೈಲಿಗೆ ಸಿಲುಕಿ ಗಂಭೀರ ಗಾಯಗೊಂಡಿದೆ. ಕುಂಸಿ ಸಮೀಪ ರೇಚಿಕೊಪ್ಪ (Rechikoppa) ಗ್ರಾಮದಲ್ಲಿ ಮಧ್ಯಾಹ್ನ ಘಟನೆ ಸಂಭವಿಸಿದೆ. ಶಿವಮೊಗ್ಗ – ತಾಳಗುಪ್ಪ ರೈಲಿಗೆ (Train) ಸಿಲುಕಿದ್ದು, ಸ್ವಲ್ಪ ದೂರದವರೆಗೆ ರೈಲು ಎಮ್ಮೆಯನ್ನು ಎಳೆದುಕೊಂಡು ಹೋಗಿದೆ. ಚಾಲಕ ರೈಲು ನಿಲ್ಲಿಸಿ ಪರಿಶೀಲಿಸಿದಾಗ ಎಮ್ಮೆ (Buffalo) ಬದುಕಿತ್ತು. ಸ್ಥಳೀಯರು, ಪ್ರಾಯಣಿಕರು, ಕಾರ್ಮಿಕರ ನೆರವಿನಿಂದ ರೈಲಿನಡಿ ಸಿಲುಕಿದ್ದ ಎಮ್ಮೆಯನ್ನು ರಕ್ಷಿಸಲಾಗಿದೆ. ಎಮ್ಮೆ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಫೋಟೊ, ಮಾಹಿತಿ : ಈಶ್ವರ್
ಇದನ್ನೂ ಓದಿ – ಶಿವಮೊಗ್ಗ LIVE ನ್ಯೂಸ್ | ಈವರೆಗೂ ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಟಾಪ್ 10 ನ್ಯೂಸ್ | 18 AUGUST 2023