ಶಿವಮೊಗ್ಗ ವಿಮಾನ ನಿಲ್ದಾಣದ ಮುಂದೆ ಹೈ ಸೆಕ್ಯೂರಿಟಿ, ಪ್ರಧಾನಿ ವಿಮಾನ ನೋಡಲು ಮಕ್ಕಳೊಂದಿಗೆ ಬಂದ ಜನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 25 MARCH 2023

SHIMOGA : ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ವಿಚಾರ ತಿಳಿದು ಶಿವಮೊಗ್ಗ ವಿಮಾನ ನಿಲ್ದಾಣದ (Shimoga Airport) ಮುಂದೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಹೆಲಿಕಾಪ್ಟರ್ ಆಗಮಿಸುವುದು, ವಿಮಾನ ಟೇಕ್ ಆಫ್ ಆಗುವ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದರು.

Curious-People-Watch-PM-Modi-flight.

ಗಣ್ಯರಿಂದ ಬೀಳ್ಕೊಡುಗೆ

ದಾವಣಗೆರೆಯಿಂದ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣ್ಯರು ಬೀಳ್ಕೊಡುಗೆ ನೀಡಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

frige repair

ಪ್ರಧಾನಿ ಭೇಟಿ ಹಿನ್ನೆಲೆ ವಿಮಾನ ನಿಲ್ದಾಣದ (Shimoga Airport) ಒಳಾಂಗಣ ಪ್ರವೇಶಿಸುವವರಿಗೆ ಪ್ರತ್ಯೇಕ ಗುರುತಿನ ಚೀಟಿ ವ್ಯವಸ್ಥೆ ಮಾಡಲಾಗಿತ್ತು.

Modi Flight

ಭುಜದ ಮೇಲೆ ಮಕ್ಕಳನ್ನು ಕೂರಿಸಿಕೊಂಡರು

ಇನ್ನು, ಪ್ರಧಾನಿ ನರೇಂದ್ರ ಮೋದಿ ಭೇಟಿ, ವಿಮಾನದಲ್ಲಿ ಅವರು ದೆಹಲಿಗೆ ಪ್ರಯಾಣ ಬೆಳೆಸುವ ವಿಚಾರ ತಿಳಿದು ವಿಮಾನ ನಿಲ್ದಾಣದ ಗೇಟ್ ಮುಂದೆ ಜನ ಸೇರಿದ್ದರು. ಸುರಕ್ಷತೆ ದೃಷ್ಟಿಯಿಂದ ಜನರನ್ನು ಗೇಟಿನಿಂದ ಹೊರಗೆ ನಿಲ್ಲಿಸಲಾಗಿತ್ತು. ಸಾರ್ವಜನಿಕರು ಪ್ರಧಾನಿ ಮೋದಿ ಅವರ ವಿಶೇಷ ವಿಮಾನವನ್ನು ಕಣ್ತುಂಬಿಕೊಂಡರು. ಮಕ್ಕಳನ್ನು ಭುಜದ ಮೇಲೆ ಕೂರಿಸಿಕೊಂಡು ವಿಮಾನ ತೋರಿಸಿದರು.

Modi Flight

ಮೊಬೈಲ್ ನಲ್ಲಿ ವಿಮಾನ ಸೆರೆ

ಗೇಟ್ ಮುಂಭಾಗ, ವಿನಾಯಕ ನಗರ ಸೇರಿದಂತೆ ವಿವಿಧೆಡೆ ಜನರು ಮೊಬೈಲ್ ನಲ್ಲಿ ವಿಮಾನ ಹಾರಾಡುವ ದೃಶ್ಯ ಸೆರೆ ಹಿಡಿದರು. ಎತ್ತರದ ಕಟ್ಟಡಗಳ ಮೇಲೆ ನಿಂತು ಜನರು ವಿಮಾನ ಚಲಿಸುವುದನ್ನು ಚಿತ್ರಿಕರಿಸಿಕೊಂಡು ಖುಷಿ ಪಟ್ಟರು.

ಇದನ್ನೂ ಓದಿ – ಮೂರು ಹೆಲಿಕಾಪ್ಟರ್ ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ವಿಶೇಷ ವಿಮಾನ ಹತ್ತಿದ ಪ್ರಧಾನಿ ಮೋದಿ

Ayanuru Manjunath

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 25, 2023

Leave a Comment