SHIVAMOGGA LIVE NEWS | BIKE | 1 ಜೂನ್ 2022
ಐದು ವರ್ಷದಿಂದ ಕೆಟ್ಟು ಮನೆ ಮುಂದೆ ನಿಂತಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಥ್ ಎಂಬುವವರಿಗೆ ಸೇರಿದ ಕೈನೆಟಿಕ್ ಸ್ಪಾರ್ಕ್ ಬೈಕ್ ಕಳ್ಳತನವಾಗಿದೆ. 1988ರ ಮಾಡೆಲ್’ನ ದ್ವಿಚಕ್ರ ವಾಹನವನ್ನು ಮಂಜುನಾಥ್ ಅವರು ಚಲಾಯಿಸುತ್ತಿದ್ದರು. ರಿಪೇರಿ ಆಗಿದ್ದರಿಂದ ಕಳೆದ ಐದು ವರ್ಷದಿಂದ ವಾಹನವನ್ನು ಚಲಾಯಿಸದೆ ಮನೆ ಮುಂದೆ ನಿಲ್ಲಿಸಿದ್ದರು.
ವಿನೋಬನಗರದ ದೇವರಾಜ ಅರಸು ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿದ್ದ ಬೈಕನ್ನು ಮೇ 25ರಂದು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಮಂಜುನಾಥ್ ಅವರು ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಪೊಲೀಸ್ ಠಾಣೆ ಪಕ್ಕದ ರಸ್ತೆಯಲ್ಲೇ ಬೈಕ್ ನಾಪತ್ತೆ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.