ಶಿವಮೊಗ್ಗದವರೇ ನಿರ್ಮಿಸಿ, ನಿರ್ದೇಶಿಸಿರುವ ಶಾಖಾಹಾರಿ ಸಿನಿಮಾ ಬಿಡುಗಡೆ ಡೇಟ್‌ ಘೋಷಣೆ, ಹೇಗಿದೆ ಚಿತ್ರ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 14 FEBRUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಜಿಲ್ಲೆಯವರೆ ನಿರ್ಮಿಸಿ, ನಿರ್ದೇಶಿಸಿರುವ ಶಾಖಾಹಾರಿ ಕನ್ನಡ ಸಿನಿಮಾ ಫೆ.16ರಂದು ತೆರೆಕಾಣಲಿದೆ. ಈಗಾಗಲೇ ಟ್ರೇಲರ್‌ ಮತ್ತು ಹಾಡುಗಳು ಜನ ಮೆಚ್ಚುಗೆ ಪಡೆದಿದೆ. ನಟರಾದ ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿತ್ರತಂಡ ಶಿವಮೊಗ್ಗದಲ್ಲಿ ಇವತ್ತು ಸುದ್ದಿಗೋಷ್ಠಿ ನಡೆಸಿ, ಸಿನಿಮಾದ ಕುರಿತು ಮಾಹಿತಿ ನೀಡಿದರು.

ಯಾರೆಲ್ಲ ಏನೇನು ಹೇಳಿದರು?

rajesh-keelambiರಾಜೇಶ್ ಕೀಳಂಬಿ, ನಿರ್ಮಾಪಕ : ನಟರಾದ ಸುದೀಪ್, ರಕ್ಷಿತ್ ಶೆಟ್ಟಿ ಶಾಖಾಹಾರಿ ಸಿನಿಮಾದ ಟ್ರೇಲರ್ ಮೆಚ್ಚಿದ್ದಾರೆ. ಸಿನಿಮಾ ನಿರ್ಮಾಣ ಬೆಂಗಳೂರಿಗೆ ಸೀಮಿತ ಆಗಬಾರದು‌‌. ಶಿವಮೊಗ್ಗದಲ್ಲೂ ಚಿತ್ರ ನಿರ್ಮಾಣ ಮಾಡಬಹುದು ಎಂದು ಸಾಬೀತುಪಡಿಸುವ ಪ್ರಯತ್ನ ಈ ಶಾಖಾಹಾರಿ. ಸಿನಿಮಾದ ಶಕ್ತಿ ಇರುವುದು ಕಥೆಯಲ್ಲಿ. ಇಬ್ಬರು ನಟರು ರಂಗಾಯಣ ರಘು, ಗೋಪಲಕೃಷ್ಣ ದೇಶಪಾಂಡೆ ಅವರು ನಟಿಸಿದ್ದಾರೆ. ಸುಜಯ್ ಶಾಸ್ತ್ರಿ, ಪ್ರತಿಮಾ ನಾಯಕ್, ಹರಿಣಿ, ವಿನಯ್, ಶ್ರೀಹರ್ಷ ಗೋಬಟ್‌, ನಿಧಿ ಹೆಗಡೆ ಮುಂತಾದವರು ಅಭಿನಯಿಸಿದ್ದಾರೆ.

director-sandeepಸಂದೀಪ್‌ ಸುಂಕದ್‌, ನಿರ್ದೇಶಕ : ನಾಟಕಕಾರ ಎಸ್.ಆರ್‌.ಗಿರೀಶ್ ಅವರ ನಾಟಕದ ತುಣುಕು ಇಟ್ಟುಕೊಂಡು ಈ ಕಥೆ ರಚಿಸಲಾಗಿದೆ. ಈಗಿನ ಟ್ರೆಂಡ್‌ಗೆ ತಕ್ಕ ಹಾಗೆ ಕಥೆ ಸಿದ್ಧಪಡಿಸಲಾಗಿದೆ. ಕೌತುಕ ಸನ್ನಿವೇಶಗಳನ್ನು ಸೃಷ್ಠಿಸಿ ಶಿವಮೊಗ್ಗದ ತೀರ್ಥಹಳ್ಳಿ ಸುತ್ತಮುತ್ತ ಚಿತ್ರಿಕರಣ ಮಾಡಲಾಗಿದೆ.

ಗೋಪಾಲಕೃಷ್ಣ ದೇಶಪಾಂಡೆ, ನಟ : ಅಪರೂಪದ ಮತ್ತು ಸರಳವಾದ ಕಥೆ. ಶಿವಮೊಗ್ಗದ ಜನರು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದೇನೆ. ಸಿನಿಮಾ ಎಮೋಷನಲ್ ಕ್ರೈಮ್ ಥ್ರಿಲ್ಲರ್. ಇಂತಹ ಕಥೆಯನ್ನು ಆಯ್ಕೆ ಮಾಡಿ ನಿರ್ಮಿಸುವುದು ಸುಲಭದ ಸಂಗತಿಯಲ್ಲ.

ಸಹ ನಿರ್ಮಾಪಕಿ ರಂಜಿನಿ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಇದನ್ನೂ ಓದಿ – ಜಮೀನಿನಲ್ಲಿ ಸಿಕ್ತು ರಾಶಿಗಟ್ಟಲೆ ಚಿನ್ನದ ಸರಗಳು, ಮೂಟೆಯಲ್ಲಿ ತಂದು ಮಾರಾಟ, ಆಮೇಲೆ ಆಗಿದ್ದೇನು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment