ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಏಪ್ರಿಲ್ 2021
ವೀಕೆಂಡ್ ಕರ್ಫ್ಯೂಗೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ರಿಲ್ಯಾಕ್ಸ್ ನೀಡಲಾಗಿದೆ. ಜನರು ಅಗತ್ಯ ವಸ್ತುಗಳ ಖರೀದಿಸುತ್ತಿದ್ದು, ಸಾಮಾನ್ಯ ದಿನದಂತೆ ಇದೆ.
ಹಾಲು, ದಿನಸಿ, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಮಾಡಲಾಗುತ್ತಿದೆ. ನಗರದಾದ್ಯಂತ ಜನ ಮತ್ತು ವಾಹನ ಸಂಚಾರವಿದೆ.
ಸರ್ಕಾರಿ ಬಸ್ ಇದೆ
ಶಿವಮೊಗ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರವಿದೆ. ಕರ್ಫ್ಯೂ ಜಾರಿಯಾದ ಬಳಿಕವು ಸರ್ಕಾರಿ ಬಸ್ಗಳು ಸಂಚಾರ ಮಾಡಲಿವೆ. ಸದ್ಯಕ್ಕೆ ಆಟೋ, ಟ್ರಾಕ್ಸ್ಗಳು ಓಡಾಡುತ್ತಿವೆ. ಖಾಸಗಿ ವಾಹನಗಳು ಸಂಚರಿಸುತ್ತಿವೆ. ಹತ್ತು ಗಂಟೆ ಬಳಿಕ ಖಾಸಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
ತುರ್ತು ಸೇವೆಗೆ ಅವಕಾಶ
ಕರ್ಫ್ಯೂ ಅವಧಿಯಲ್ಲಿ ತುರ್ತು ಸೇವೆಗಳಿಗೆ ಅವಕಾಶ ಇದೆ. ಆಸ್ಪತ್ರೆಗೆ ತೆರಳುವುದು, ಲಸಿಕೆ ಹಾಕಿಸಿಕೊಳ್ಳಲು ಹೋಗುವವರಿಗೆ ಅವಕಾಶವಿದೆ. ಉಳಿದಂತೆ ಅನಗತ್ಯ ಓಡಾಟಕ್ಕೆ, ಜನರು ಗುಂಪುಗೂಡುವುದಕ್ಕೆ ನಿಷೇಧವಿದೆ.
ಎಲ್ಲೆಲ್ಲೂ ಪೊಲೀಸ್, ಎಲ್ಲವು ಬಂದ್
ನಗರದಾದ್ಯಂತ ಅಂಗಡಿಗಳು ಬಂದ್ ಆಗಿವೆ. ಗಾಂಧಿ ಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಬಿ.ಹೆಚ್.ರಸ್ತೆ, ವಿನೋಬನಗರ ಸೇರಿದಂತೆ ಪ್ರಮುಖ ವಹಿವಾಟು ಸ್ಥಳಗಳು ಬಂದ್ ಆಗಿವೆ. ಎಪಿಎಂಸಿ ಮಾರುಕಟ್ಟೆಯನ್ನೂ ಬಂದ್ ಮಾಡಲಗಿದೆ. ನಗರದಾದ್ಯಂತ ಪೊಲೀಸರನ್ನು ನಿಯೋಜಿಸಲಾಗಿತ್ತು, ಹತ್ತು ಗಂಟೆ ಬಳಿಕ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತದೆ.