SHIVAMOGGA LIVE NEWS | 28 SEPTEMBER 2023
SHIMOGA : ಪಕ್ಷದಲ್ಲಿ (Party) ನಡೆಯುತ್ತಿರುವ ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಬೇಸತ್ತು ಪಕ್ಷ ತ್ಯಜಿಸುತ್ತಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮಕ್ಬುಲ್ ಅಹಮದ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ (Party) ತೊರೆಯುತ್ತಿರುವುದಕ್ಕೆ ಬೇಸರವಿದೆ. ಎರಡು ವರ್ಷಗಳಿಂದ ಸಾಮರ್ಥ್ಯ ಮೀರಿ ಶ್ರಮ ಹಾಕಿ ಪಕ್ಷ ಸಂಘಟಿಸಿದ್ದೇವೆ. ನಮ್ಮ ಶ್ರಮಕ್ಕೆ ಈಗ ಬೆಲೆ ಇಲ್ಲದಂತಾಗಿದೆ. ನೂತನ ಜಿಲ್ಲಾಧ್ಯಕ್ಷ ಶಿವಕುಮಾರ್ ಗೌಡ ಅವರು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಅವರ ಈ ನಡೆಯಿಂದ ಬೇಸರವಾಗಿದೆ. ಆದ್ದರಿಂದ ಶಿವಕುಮಾರ್ ಗೌಡ ಅವರು ಈ ಕೂಡಲೆ ಕ್ಷಮೆ ಯಾಚಿಸಬೇಕು. ಸದ್ಯ 20 ಮಂದಿ ಪಕ್ಷ ತೊರೆಯುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಂದೋಬಸ್ತ್ಗೆ ಸಾವಿರ ಸಾವಿರ ಪೊಲೀಸ್, ಸಿಟಿಯಲ್ಲಿ ರೂಟ್ ಮಾರ್ಚ್, ಸಿಬ್ಬಂದಿಗೆ ಗುಣಮಟ್ಟದ ಊಟಕ್ಕೆ ಪ್ಲಾನ್
ಪತ್ರಿಕಾಗೋಷ್ಠಿಯಲ್ಲಿ ಮಹಮದ್ ಅಲಿ, ದಾದಾ ಖಲಂದರ್, ಸಮೀನಾ, ಫಕ್ರುದ್ದೀನ್, ಇರ್ಫಾನ್ ಪಾಷಾ ಮತ್ತಿತರರಿದ್ದರು.
