ಶಿವಮೊಗ್ಗಕ್ಕೆ ಮೊದಲು ಬರುತ್ತೆ ಕರೋನ ಲಸಿಕೆ, ಅಕ್ಕಪಕ್ಕದ ಜಿಲ್ಲೆಗೆ ಇಲ್ಲಿಂದಲೇ ಪೂರೈಕೆ, ಹೇಗಿದೆ ಗೊತ್ತಾ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 11 DECEMBER 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇನ್ನೇನು ಕೆಲವೆ ಸಮಯದಲ್ಲಿ ಕರೋನ ಲಸಿಕೆ ಜನ ಬಳಕೆಗೆ ಬರಲಿದೆ. ಲಸಿಕೆ ಹಂಚಿಕೆಗೆ ಸರ್ಕಾರಗಳು ಸಿದ್ಧತೆ ಆರಂಭಿಸಿದೆ. ಲಸಿಕೆ ಪೂರೈಕೆ ಸುಗಮಗೊಳಿಸಲು ಕರ್ನಾಟಕ ಸರ್ಕಾರ ರಾಜ್ಯದ ಮೂರು ಜಿಲ್ಲೆಯಲ್ಲಿ ಲಸಿಕೆ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಿದೆ.

129722226 1022058594940717 1962776210255359546 n.jpg? nc cat=107&ccb=2& nc sid=730e14& nc ohc=VrZsJOFIqiEAX Mfrl3& nc ht=scontent.fixe1 2

ಶಿವಮೊಗ್ಗದಲ್ಲಿ ಲಸಿಕೆ ಸಂಗ್ರಹ ಕೇಂದ್ರ

ರಾಜ್ಯ ಸರ್ಕಾರ ಶಿವಮೊಗ್ಗ, ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಲಸಿಕೆ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಅಕ್ಕಪಕ್ಕದ ಜಿಲ್ಲೆಗಳಿಗೆ ಇಲ್ಲಿಂದಲೇ ಲಸಿಕೆ ಪೂರೈಕೆ ಆಗಲಿದೆ. ಶಿವಮೊಗ್ಗ ಸಿಟಿಯ ನಾಲ್ಕು ಕಡೆ ಈಗಾಗಲೇ ಲಸಿಕೆ ಸಂಗ್ರಹಕ್ಕೆ ಸ್ಥಳ ಗುರುತಿಸಲಾಗಿದೆ.

ಲಸಿಕೆ ಸಂಗ್ರಹಕ್ಕೆ ಎಲ್ಲೆಲ್ಲಿ ಸ್ಥಳ ಗುರುತಿಸಲಾಗಿದೆ?

  1. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಔಷಧ ಸಂಗ್ರಹ ಕೇಂದ್ರದ ವಾಕಿನ್‍ ಫ್ರೀಜರ್‍
  2. ಮೆಗ್ಗಾನ್ ಆಸ್ಪತ್ರೆ ಮುಖ್ಯ ಕಟ್ಟಡದಲ್ಲಿ ಮೆಡಿಕಲ್ ಕಾಲೇಜಿಗೆ ಸೇರಿದ ವಾಕಿನ್ ಫ್ರೀಜರ್
  3. ಪಶುವೈದ್ಯಕೀಯ ಕಾಲೇಜು ಆವರಣದಲ್ಲಿರುವ ವಾಕಿನ್ ಫ್ರೀಜರ್
  4. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‍) ಆವರಣದಲ್ಲಿರುವ ವಾಕಿನ್ ಫ್ರೀಜರ್

ಲಸಿಕೆ ಸಂಗ್ರಹ ಹೇಗೆ?

ಕರೋನ ಲಸಿಕೆಯನ್ನು ತಣ್ಣೆಯ ವಾತಾವರಣದಲ್ಲಿ ಇರಿಸಬೇಕಾಗುತ್ತದೆ. ದೊಡ್ಡ ಸಂಖ್ಯೆಯಲ್ಲಿ ಲಸಿಕೆ ಸಂಗ್ರಹಿಸಬೇಕಾಗಿರುವುದರಿಂದ ಸಾಮಾನ್ಯ ಫ್ರಿಜರ್‍ಗಳನ್ನು ಉಪಯೋಗಿಸುವುದಿಲ್ಲ. ಇದಕ್ಕಾಗಿ ವಾಕಿನ್ ಫ್ರೀಜರ್‍ಗಳೆ ಬೇಕು. ಔಷಧ ಉಗ್ರಾಣಗಳಲ್ಲಿ ಔಷಧ ಸಂಗ್ರಹಕ್ಕೆ ವಾಕಿನ್ ಫ್ರೀಜರ್‍ ಇರುತ್ತವೆ. ಇವು ದೊಡ್ಡ ಗಾತ್ರದ ಫ್ರೀಜರ್‍ಗಳು. ತಣ್ಣನೆ ವಾತಾವರಣದಲ್ಲಿ ಇರಿಸಬೇಕಾದ ಔಷಧಗಳನ್ನು ಇದರಲ್ಲಿಯೇ ಇರಿಸಲಾಗುತ್ತದೆ. ಕರೋನ ಲಸಿಕೆಯನ್ನು ಇದರಲ್ಲಿಯೇ ಇಟ್ಟು ಪೂರೈಕೆ ಮಾಡಲಾಗುತ್ತದೆ.

113 ಕಡೆ ಕೋಲ್ಡ್ ಚೈನ್ ಪಾಯಿಂಟ್

ಶಿವಮೊಗ್ಗ ಸಿಟಿಯಲ್ಲಿ ಲಸಿಕೆ ಸಂಗ್ರಹದ ಪ್ರಮುಖ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ತಾಲೂಕು ಮಟ್ಟದಲ್ಲಿ, ಸಮುದಾಯದ ಹಂತಕ್ಕೆ ಲಸಿಕೆ ತಲುಪಬೇಕಿದೆ. ಹಾಗಾಗಿ 113 ಕಡೆ ಕೋಲ್ಡ್ ಚೈನ್ ಪಾಯಿಂಟ್ ಸ್ಥಾಪಿಸಲಾಗಿದೆ. ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಈ ಕೋಲ್ಡ್ ಚೈನ್‍ ಪಾಯಿಂಟ್‍ನಲ್ಲಿವೆ. ಲಸಿಕೆಯನ್ನು ಇಲ್ಲಿ ಇರಿಸಲು ಯೋಜಿಸಲಾಗಿದೆ. ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದರಿಂದ, ಇಲ್ಲಿ ಸಣ್ಣ ಮಟ್ಟದ ಫ್ರೀಜರ್‍ಗಳು ಇರುತ್ತವೆ. ಈ ಫ್ರೀಜರ್‍ಗಳಲ್ಲಿ ಕರೋನ ಲಸಿಕೆಯನ್ನು ಇರಿಸಿ, ಅದನ್ನು ಹಳ್ಳಿ ಹಳ್ಳಿಯ ಹಂತಕ್ಕೂ ತಲುಪಿಸಲು ಯೋಜಿಸಲಾಗಿದೆ.

ವಾಕಿನ್‍ ಫ್ರೀಜರ್‍ ಹೇಗಿರುತ್ತೆ? ಲಸಿಕೆ ಸಂಗ್ರಹ ಹೇಗೆ? ಎಲ್ಲದರ ವಿಡಿಯೋ ರಿಪೋರ್ಟ್ ಇಲ್ಲಿದೆ.

ಅಂತಿಮ ಹಂತದ ಪ್ರಯೋಗದಲ್ಲಿ ಇರುವ ಕರೋನ ಲಸಿಕೆ ಕೆಲವೇ ಸಮಯದಲ್ಲಿ ಜನ ಬಳಕೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಗ್ರಹ ಕೇಂದ್ರಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಶಿವಮೊಗ್ಗದಲ್ಲಿ ಈಗಲಾಗೆ 20 ಸಾವಿರ ಮಂದಿಯನ್ನು ಗುರುತಿಸಲಾಗಿದ್ದು, ಮೊದಲು ಅವರಿಗೆ ಕರೋನ ಲಸಿಕೆ ನೀಡಲಾಗುತ್ತದೆ.

126615369 1008713619608548 6168072243270294966 n.jpg? nc cat=105&ccb=2& nc sid=730e14& nc ohc=MosDq1Hs8ugAX8HmiN1& nc ht=scontent.fblr1 4

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment