ಕಾರು ಚೇಸ್‌ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

Published On : ಮಾರ್ಚ್ 28, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಕಾರು ಟಚ್‌ ಆಗಿದೆ ಎಂಬ ಕಾರಣಕ್ಕೆ ನಡೆದ ಗಲಾಟೆಯಲ್ಲಿ ನಾಲ್ವರು ಅಪರಿಚಿತರು ಗುತ್ತಿಗೆದಾರರೊಬ್ಬರ (contractor) ಮೇಲೆ ಹಲ್ಲೆ ನಡೆಸಿದ್ದಾರೆ.

Sunrise Facility Services, Sri sai Trust Shimoga

ನಗರದ ಜ್ಯೋತಿ ನಗರದ ನಿವಾಸಿ ಹಾಗೂ ಗುತ್ತಿಗೆದಾರ ಪ್ರಸನ್ನ (46) ಅವರು ಮಾರ್ಚ್ 24ರ ಸಂಜೆ ತಮ್ಮ ಸ್ಯಾಂಟ್ರೋ ಕಾರಿನಲ್ಲಿ ಕೆಲಸದ ನಿಮಿತ್ತ ತರಿಕೆರೆಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬಿ.ಆರ್.ಪಿ ಮಾರ್ಗವಾಗಿ ಬರುತ್ತಿದ್ದಾಗ, ಲಕ್ಕಿನಕೊಪ್ಪ ಸರ್ಕಲ್ ಬಳಿ ಅವರ ಕಾರು ಮತ್ತೊಂದು ಕಾರಿಗೆ ತಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – ಸಿಗಂದೂರು ಲಾಂಚ್‌ ವಿಚಾರ, ಸರ್ಕಾರ ನಿರ್ಧಾರ ಪ್ರಕಟಿಸುವಂತೆ ಆಗ್ರಹ, ಏನಂದ್ರು ಪ್ರಸನ್ನ ಕೆರೆಕೈ?

ಇದೇ ಕಾರಣಕ್ಕೆ ಕಾರಿನಲ್ಲಿದ್ದ ನಾಲ್ವರು ಅಪರಿಚಿತರು ಪ್ರಸನ್ನ ಅವರ ಕಾರನ್ನು ಬೆನ್ನಟ್ಟಿಕೊಂಡು ಬಂದಿದ್ದಾರೆ. ಶಿವಮೊಗ್ಗ – ಎನ್.ಆರ್.ಪುರ ರಸ್ತೆಯ ಕಾಚಿನಕಟ್ಟೆ ಗ್ರಾಮದ ವಿಮಾನ ನಿಲ್ದಾಣದ ಎದುರು ದೇವಸ್ಥಾನದ ಬಳಿ ರಾತ್ರಿ ಸುಮಾರು 9 ಗಂಟೆಗೆ ಪ್ರಸನ್ನ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ನಮ್ಮ ಕಾರಿಗೆ ಟಚ್ ಮಾಡಿದ್ದೀಯಾ ಎಂದು ಅಪರಿಚಿತರು ಗಲಾಟೆ ತೆಗೆದಿದ್ದಾರೆ.

200123 Police Jeep With Light jpg

ನಾಲ್ವರು ಪ್ರಸನ್ನ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಪ್ರಸನ್ನ ಅವರ ಮೂಗು, ತುಟಿ ಮತ್ತು ಹಣೆಗೆ ತೀವ್ರ ಗಾಯಗಳಾಗಿವೆ. ಸ್ಥಳೀಯರು ಬಂದಾಗ ಆರೋಪಿಗಳು ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

Number 1 News Website in shimoga - Shivamogga Live

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 28, 2026

Leave a Comment