ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | HOSANAGARA NEWS | 04 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕೊಟ್ಟ ಮಾತು ಉಳಿಸಿಕೊಂಡ ಗ್ರಾಮ ಪಂಚಾಯಿತಿ ಸದಸ್ಯರು. ಭರವಸೆಯಂತೆ ನಡೆಯಿತು ಶ್ರಮದಾನ. ಇನ್ನೊಂದು ತಿಂಗಳಲ್ಲಿ ಕುಸಿಯಬಹುದಾಗಿದ್ದ ಮನೆ ಈಗ ಗಟ್ಟಿಮುಟ್ಟು. ಉಳಿದೆಲ್ಲ ಜನಪ್ರತಿನಿಧಿಗಳಿಗೆ ಇದು ಮಾದರಿ.
ನೂತನ ಸದಸ್ಯರ ‘ಭಾನುವಾರದ ಶ್ರಮದಾನ’
ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭ ಕೊಟ್ಟಿದ್ದ ಭರವಸೆ ಈಡೇರಿಸಲು ನೂತನ ಸದಸ್ಯರು ಭಾನುವಾರದ ಶ್ರಮದಾನ ನಡೆಸಿದರು. ಬಡ ಕುಟುಂಬವೊಂದಕ್ಕೆ ನೆರವಾಗಿದ್ದು, ರಾಜ್ಯಾದ್ಯಂತ ಆಯ್ಕೆಯಾದ ನೂತನ ಸದಸ್ಯರಿಗೆ ಮಾದರಿಯಾಗಿದ್ದಾರೆ. ಹೊಸನಗರ ತಾಲೂಕು ಮೂಡುಗೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಸೆ ಗ್ರಾಮದಲ್ಲಿ ಈ ಶ್ರಮದಾನ ನಡೆದಿದೆ.
ಕೊಟ್ಟ ಭರವಸೆ ಏನು? ಶ್ರಮದಾನ ಏಕೆ?
ಕಾವಡಗೆರೆ ಅಶೋಕ್ ಅವರ ಮನೆ ಕುಸಿಯುವ ಹಂತಕ್ಕೆ ತಲುಪಿತ್ತು. ಬಡತನದಿಂದಾಗಿ ಮನೆ ರಿಪೇರಿ ಕಷ್ಟವಾಗಿತ್ತು. ಅಶೋಕ್, ಅವರ ಪತ್ನಿ, ಪುತ್ರ, ಸೊಸೆ ಈ ಮನೆಯಲ್ಲಿ ವಾಸವಿದ್ದರು. ಚುನಾವಣೆ ಪ್ರಚಾರದ ವೇಳೆ ಮತ ಕೇಳಲು ಬಂದಿದ್ದ ಕೆ.ಬಿ.ಕುಮಾರ್ ಅವರು ಇದನ್ನು ಗಮನಿಸಿ, ರಿಪೇರಿ ಮಾಡಿಸಿ ಕೊಡುವ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ, ಕೆ.ಬಿ.ಕುಮಾರ್ ಅವರು ಸ್ನೇಹಿತರ ಜೊತೆಗೂಡಿ ಭಾನುವಾರದ ಶ್ರಮದಾನ ಮಾಡಿದರು. ಕಾವಡಗೆರೆ ಅಶೋಕ್ ಅವರ ಮನೆ ರಿಪೇರಿ ಕಾರ್ಯ ನಡೆಸಿದರು.
ಏನೆಲ್ಲ ರಿಪೇರಿ ಮಾಡಿಸಿದ್ದಾರೆ?
ಕುಸಿಯುವ ಹಂತದಲ್ಲಿದ್ದ ಛಾವಣಿಯನ್ನು ರಿಪೇರಿ ಮಾಡಿಸಿದ್ದಾರೆ. ಹೊಸದಾಗಿ ಗಳ, ರಾಡ್ ಹಾಕಿಸಿ ದುರಸ್ಥಿ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ ಕುಸಿಯಬಹುದಾಗಿದ್ದ ಮನೆ ಈಗ ಗಟ್ಟಿಮುಟ್ಟಾಗಿದೆ. ಅಶೋಕ್ ಅವರ ಕುಟುಂಬದ ನಾಲ್ವರು ಇನ್ನಷ್ಟು ವರ್ಷ ನೆಮ್ಮದಿಯಿಂದ ಆ ಮನೆಯಲ್ಲಿ ಜೀವನ ನಡೆಸಬಹುದಾಗಿದೆ.
ಶ್ರಮದಾನದಲ್ಲಿ ಯಾರೆಲ್ಲ ಭಾಗಿಯಾಗಿದ್ದರು?
ಗ್ರಾಮ ಪಂಚಾಯಿತಿಯ ನೂತನ ಸದಸ್ಯ ಕೆ.ಬಿ.ಕುಮಾರ್ ಅವರೊಂದಿಗೆ ಮತ್ತೊಬ್ಬ ಸದಸ್ಯೆ ಸವಿತಾ ಕೈಜೋಡಿಸಿದ್ದರು. ಸ್ಥಳೀಯರಾದ ಮಧುಕರ ಶೆಟ್ಟಿ, ನೂತನ್ ಬೈಸೆ, ನಾಗರಾಜ್, ಮುಕುಂದ್, ಅತ್ತಿಕೊಡಿಗೆ ಮಹೇಶ್, ಮಹೇಂದ್ರ, ದರ್ಶನ್, ರತೀಶ್, ಪ್ರವೀಣ್, ಶುಭಾಷ್, ಅಶೋಕ್ ಜೋಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಯಾರೆಲ್ಲ ಏನೇನು ಹೇಳಿದರು?
ಹೊಸ ಮನೆ ಕಟ್ಟಿಸಿಕೊಡಲು ಪ್ರಯತ್ನ
“ಪ್ರಚಾರಕ್ಕೆ ಬಂದಾಗ ಮನೆ ಶಿಥಿಲಾವಸ್ಥೆಯಲ್ಲಿತ್ತು. ಗೆಲ್ಲಲಿ, ಸೋಲಲಿ ಮನೆ ರಿಪೇರಿ ಮಾಡಿಸಿಕೊಡುವ ಭರವಸೆ ಕೊಟ್ಟಿದ್ದೆವು. ಚುನಾವಣೆ ಬಳಿಕ ಬಂದು ಭರವಸೆ ಈಡೇರಿಸುತ್ತಿದ್ದೇವೆ. ಈಗ ಮನೆಯನ್ನು ಪುನರ್ ನಿರ್ಮಾಣ ಮಾಡಿಸುವಷ್ಟು ಶಕ್ತಿ ಇಲ್ಲ. ಹಾಗಾಗಿ ಗಳ, ರಾಡ್ ಹಾಕಿ ರಿಪೇರಿ ಮಾಡಿಸುತ್ತಿದ್ದೇವೆ. ಹತ್ತು ವರ್ಷ ಇಲ್ಲಿ ವಾಸ ಮಾಡಿಸುವಷ್ಟು ಗಟ್ಟಿ ಮಾಡಿಸುತ್ತಿದ್ದೇವೆ. ಹೊಸ ಮನೆ ಕಟ್ಟಿಸಿಕೊಡಲು ಪಂಚಾಯಿತಿಯಿಂದ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತೇವೆ.”
- ಕುಮಾರ್, ಗ್ರಾಮ ಪಂಚಾಯಿತಿ ನೂತನ ಸದಸ್ಯ
ನಮ್ಮ ಸ್ಥಿತಿ ಕಂಡು ನೆರವಾಗಿದ್ದಾರೆ
“ನನ್ನ ಹಾಗೆ ಎಷ್ಟೋ ಬಡವರಿದ್ದಾರೆ. ಅವರಾಗಿಯೇ ಬಂದು ನಮ್ಮ ಸ್ಥಿತಿ ಕಂಡು ಅವರೆ ನೆರವು ನೀಡುತ್ತಿದ್ದಾರೆ. ಇದು ತುಂಬಾ ಸಂತೋಷದ ವಿಚಾರ.”
- ಅಶೋಕ್, ಮನೆಯವರು
“ಕಷ್ಟ ಇದೆ ಅಂತಾ ಗೊತ್ತಾದರೆ ಇನ್ನಷ್ಟು ತುಳಿಯೋರೆ ಹೆಚ್ಚು. ಅಂತಹುದರಲ್ಲಿ ಇಂತಹ ಕೆಲಸ ಮಾಡುತ್ತಿದ್ದಾರೆ. ಮತ ಹಾಕಿದ್ದೇವೆ ಬಂದು ಕೆಲಸ ಮಾಡಿಕೊಡಿ ಅಂತಾ ಕೇಳಿದರೂ ಮಾಡಿಕೊಡುತ್ತಿರಲಿಲ್ಲ. ಇವರ ಜೊತೆಗೆ ಇಂತಹ ಕೆಲಸಗಳಿಗೆ ಕೈ ಜೋಡಿಸುತ್ತೇನೆ. ಎಲ್ಲಿ ಕರೆದರೂ ಹೋಗಿ ಇಂತಹ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ.”
- ವಿಜಯ್, ಅಶೋಕ್ ಅವರ ಪುತ್ರ
ಇದು ಮಾದರಿ ಕಾರ್ಯ
“ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಇಂತಹ ಕೆಲಸ ಮಾಡಿದರೆ ಎಲ್ಲರಿಗೂ ಖುಷಿಯಾಗಲಿದೆ. ಈ ರೀತಿ ಕಾರ್ಯ ಮತ್ತಷ್ಟು ಆಗಬೇಕಿದೆ. ಜನರಿಗೆ ನಿಜಕ್ಕೂ ಅನುಕೂಲ ಆಗಲಿದೆ.”
- ಶುಭಾಷ್, ಸ್ಥಳೀಯರು
ಪ್ರತಿ ಗ್ರಾಮದಲ್ಲಿಯೂ ಇಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಸದಸ್ಯರು ಪರಿಹಾರ ಮಾಡಿದರೆ ಯಾವುದೆ ಸಮಸ್ಯೆಗಳು ಇರುವುದಿಲ್ಲ. ಇದು ಮಾದರಿ ಕಾರ್ಯ. ಮಾರ್ಗದರ್ಶನವಾಗಬೇಕು.
- ನೂತನ್, ಸ್ಥಳೀಯರು
ಮಾಹಿತಿ, ಫೋಟೊ : ಗುಡ್ ಮಾರ್ನಿಂಗ್ ಕರ್ನಾಟಕ ನ್ಯೂಸ್ ವಬ್ಸೈಟ್, ಹೊಸನಗರ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]