ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 06 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯುವತಿಯೊಬ್ಬಳ ಫೋಟೊ ವಿಚಾರವಾಗಿ ಸಹೋದರರ ನಡುವೆ ಜಗಳವಾಗಿದ್ದು, ಒಬ್ಬರಿಗೆ ಗಂಭೀರ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಏನಿದು ಕೇಸ್? ಯಾಕಾಯ್ತು ಗಲಾಟೆ?
ಮಗಳ ಫೋಟೊ ವಿಚಾರವಾಗಿ ಈರಾನಾಯ್ಕ ಅವರು ತಮ್ಮ ಸಹೋದರ ರಾಮನಾಯ್ಕ ಜೊತೆಗೆ ಜಗಳವಾಡಿಕೊಂಡಿದ್ದಾರೆ. ರಾಮನಾಯ್ಕ ಅವರ ಮಗನ ಮೊಬೈಲ್ನಲ್ಲಿ ಈರಾನಾಯ್ಕ ಅವರ ಮಗಳ ಫೋಟೊ ಇತ್ತು ಅನ್ನುವುದು ಜಗಳಕ್ಕೆ ಪ್ರಮುಖ ಕಾರಣ. ಇದೇ ವಿಚಾರವಾಗಿ ಈರಾನಾಯ್ಕ, ನಾಗನಾಯ್ಕ, ಕಿಶನ್, ಅನಿತಾ ಬಾಯಿ ಮತ್ತು ಈರಾನಾಯ್ಕ ಅವರ ಮಗಳು ರಾಮನಾಯ್ಕ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.
ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಆಯನೂರು ಸಮೀಪದ ಆನೆಸರ ಚನ್ನಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರಾಮನಾಯ್ಕ ಅವರ ಮೇಲೆ ಕಂದಲಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿರುವ ಅವರನ್ನು ಮೆಗ್ಗಾನ್ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]