ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 10 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬ್ಯಾಂಕ್‍ನಿಂದ ಕರೆ ಮಾಡುತ್ತಿರುವುದಾಗಿ ನಂಬಸಿ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ ಖಾತೆಗೆ ಖದೀರಿಮರು ಕನ್ನಾ ಹಾಕಿದ್ದಾರೆ. ಭದ್ರಾವತಿಯ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ ಅಕೌಂಟ್‍ನಿಂದ 1.10 ಲಕ್ಷ ರೂ. ಲಪಟಾಯಿಸಲಾಗಿದೆ.
ಭದ್ರಾವತಿಯ ಎಂ.ಎಂ.ಕಾಂಪೌಂಡ್‍ನ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್ ಖಾತೆಯಿಂದ ಒಮ್ಮೆ 80 ಸಾವಿರ ರೂ. ಮತ್ತೊಮ್ಮೆ 30 ಸಾವಿರ ಹಣವನ್ನು ಲಪಟಾಯಿಸಲಾಗಿದೆ.
ಇದನ್ನೂ ಓದಿ | ಸರ್ಕಾರಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಭದ್ರಾವತಿಯ ವ್ಯಕ್ತಿಗೆ ಒಂದು ಲಕ್ಷ ರೂ. ವಂಚನೆ
ಖದೀಮರ ಕೈ ಚಳಕ ಹೇಗಿತ್ತು?
ಈ ಮಹಿಳೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಕ್ರೆಡಿಟ್ ಕಾರ್ಡ್ ಸೇವೆ ಒದಗಿಸಿತ್ತು.
ಕ್ರೆಡಿಟ್ ಕಾರ್ಡ್ ಬರುವ ಮೊದಲೆ ಖದೀಮರಿಗೆ ಅದರ ಮಾಹಿತಿ ಲಭ್ಯವಾಗಿತ್ತು. ನಾಲ್ಕು ಬೇರೆ ಬೇರೆ ಮೊಬೈಲ್ ನಂಬರ್‍ಗಳಿಂದ ಕರೆ ಮಾಡಿ, ಕ್ರೆಡಿಟ್ ಕಾರ್ಡ್ ತಲುಪಿದೆಯೇ ಎಂದು ವಿಚಾರಿಸಿಕೊಂಡಿದ್ದರು.
ಇದನ್ನೂ ಓದಿ | ಹಣ ಡ್ರಾ ಮಾಡಿಲ್ಲ, ಆನ್‌ಲೈನ್ ವ್ಯವಹಾರವು ಆಗಿಲ್ಲ, ಆದರೂ ಉದ್ಯಮಿಯ ಖಾತೆಯಿಂದ 83 ಸಾವಿರ ಮಾಯ
ಮಹಿಳೆಗೆ ಕ್ರಿಡಿಟ್ ಕಾರ್ಡ್ ತಲುಪಿದ ಬಳಿಕವು ಕರೆ ಮಾಡಿದ ಖದೀಮರು, ತಾವು ಎಸ್‍ಬಿಐ ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದರು. ನಿಮ್ಮ ಕ್ರೆಡಿಟ್ ಲಿಮಿಟ್ ಹೆಚ್ಚಳ ಮಾಡಬೇಕು. ಇಲ್ಲವಾದಲ್ಲಿ ಕಾರ್ಡ್ ಕ್ಯಾನ್ಸಲ್ ಆಗಲಿದೆ ಎಂದು ಬೆದರಿಸಿದರು.
ಕ್ರೆಡಿಟ್ ಲಿಮಿಟ್ ಹೆಚ್ಚಳ ಮಾಡುವುದಾಗಿ ನಂಬಿಸಿ ಒಟಿಪಿ ಪಡೆದ ಖದೀಮರು, ಎಂಎಸ್‍ಡಬ್ಲು ಷಾ ಎಂಟರ್‍ಪ್ರೈಸಸ್ ಹೆಸರಿಗೆ ಮೊದಲಿಗೆ 80 ಸಾವಿರ ರೂ. ಹಣ ಡ್ರಾ ಮಾಡಿದ್ದಾರೆ. ಮತ್ತೊಮ್ಮೆ ಅದೇ ಸಂಸ್ಥೆಯ ಹೆಸರಿಗೆ 30 ಸಾವಿರ ರೂ. ಹಣ ಡ್ರಾ ಮಾಡಿದ್ದಾರೆ.
ಕ್ರೆಡಿಟ್ ಕಾರ್ಡ್‍ನಿಂದ 1.10 ಲಕ್ಷ ರೂ. ಹಣ ಡ್ರಾ ಆಗಿರುವ ಮೆಸೇಜು ಬಂದ ಹಿನ್ನೆಲೆ, ಮಹಿಳೆ ಬ್ಯಾಂಕನ್ನು ಸಂಪರ್ಕಿಸಿದ್ದಾರೆ.
ವಂಚನೆಗೊಳಗಾದ ವಿಚಾರ ಅರಿವಿಗೆ ಬರುತ್ತಿದ್ದಂತೆ ಭದ್ರಾವತಿ ಓಲ್ಡ್ ಟೌನ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]