ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 23 MARCH 2021
ಅಮೆಜಾನ್ ಹೆಲ್ಪ್ ಕೇರ್ ಪ್ರತಿನಿಧಿಯಂತೆ ನಟಿಸಿ ಕರೆ ಮಾಡಿ, ವ್ಯಕ್ತಿಯೊಬ್ಬರ ಖಾತೆಯಿಂದ 65 ಸಾವಿರ ರೂ. ವಂಚಿಸಿರುವ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಪ್ರಕರಣ? ಹೇಗಾಯ್ತು ವಂಚನೆ?
ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಬ್ಬರು ಅಮೆಜಾನ್ ಮೂಲಕ ಆನ್‍ಲೈನ್‍ನಲ್ಲಿ ಕಂಪ್ಯೂಟರ್ ಮೌಸ್ ಖರೀದಿಸಲು ಮುಂದಾದರು. ಮೂರು ಬಾರಿ ಹಣ ಸಂದಾಯವಾದರೂ ಆರ್ಡರ್ ಬುಕ್ ಆಗಿರಲಿಲ್ಲ. ಆದ್ದರಿಂದ ಅಮೆಜಾನ್ ಹೆಲ್ಪ್ ಸೆಂಟರ್‍ಗೆ ಕಾಲ್ ಬ್ಯಾಕ್ ರಿಕ್ವೆಸ್ಟ್ ಕಳುಹಿಸಿದ್ದರು.
ಕರೆ ಮಾಡಿದ್ದ ನಯ ವಂಚಕ
ಮರುದಿನ ಕರೆ ಮಾಡಿದ ವ್ಯಕ್ತಿಯಬ್ಬ ತನ್ನನ್ನು ಅಮೆಜಾನ್ ಹೆಲ್ಪ್ ಸೆಂಟರ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡ. ಬಳಿಕ ವೆಬ್ ಸೈಟ್ ಒಂದರ ಲಿಂಕ್ ಕಳುಹಿಸಿ, ಇದರಲ್ಲಿ ಸರ್ವೆ ಒಂದನ್ನು ಭರ್ತಿ ಮಾಡುವಂತೆ ಸೂಚಿಸದ. ಅದರಂತೆ ಬ್ಯಾಂಕ್ ಉದ್ಯೋಗಿಯು ಸರ್ವೇ ಭರ್ತಿ ಮಾಡಿದ್ದರು. ಕೆಲವೇ ಹೊತ್ತಿನಲ್ಲಿ ನಿಮ್ಮ ಹಣವು ಖಾತೆಗೆ ಮರಳಲಿದೆ ಎಂದು ಆತ ತಿಳಿಸಿದ್ದ.
ಎರಡು ದಿನದ ಬಳಿಕ ಕಾದಿತ್ತು ಶಾಕ್
ಎರಡು ದಿನದ ಬಳಿಕ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯ ಮೊಬೈಲ್ ನಂಬರ್‍ಗೆ ಮೆಸೇಜ್ ಬಂದಿದ್ದು ಮೊದಲಿಗೆ, 30 ಸಾವಿರ ರೂ. ಕಡಿತವಾಗಿದೆ. ಆ ಬಳಿಕ ಏಳು ಭಾರಿ ತಲಾ ಐದು ಸಾವಿರ ಹಣ ಕಟ್ ಅಗಿದೆ. ಪರಿಶೀಲನೆ ಬಳಿಕ ಬ್ಯಾಂಕ್ ಉದ್ಯೋಗಿಯು ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ | ಪತ್ರದಲ್ಲಿ ಇದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮೂರು ಲಕ್ಷ ಕಳೆದುಕೊಂಡ ಶಿವಮೊಗ್ಗದ ಮಹಿಳೆ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]