ಇವತ್ತು ರಾತ್ರಿಯಿಂದ ಸೆಮಿ ಲಾಕ್​ಡೌನ್​, ನಾಳೆಯಿಂದ ಯಾವ ಸೇವೆ ಇರುತ್ತೆ? ಯಾವುದಕ್ಕಿಲ್ಲ ಅವಕಾಶ? ಕಂಪ್ಲೀಟ್ ಡಿಟೇಲ್ಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಬೆಂಗಳೂರು : ಕರೋನ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಸೆಮಿ ಲಾಕ್‍ಡೌನ್ ಘೋಷಣೆ ಮಾಡಿದೆ. ಇವತ್ತು ರಾತ್ರಿ 9 ಗಂಟೆಯಿಂದಲೇ ನೂತನ ನಿಯಮ ಜಾರಿಯಾಗಲಿದೆ.

Covid 19 Vaccination Kan poster 1 1

ಸರ್ಕಾರ ಸೆಮಿ ಲಾಕ್‍ಡೌನ್ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯಾವ ಸೇವೆ ಇರುತ್ತೆ, ಯಾವುದು ಇರುವುದಿಲ್ಲ ಎಂದು ಈ ಗೈಡ್‍ಲೈನ್‍ನಲ್ಲಿ ಪ್ರಕಟಿಸಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಯಾವುದೆಲ್ಲ ಇರುತ್ತೆ?

ದಿನಸಿ, ತರಕಾರಿ, ಹಣ್ಣು, ಹಾಲು, ಬೇಕರಿ ಉತ್ಪನ್ನ, ಮಾಂಸ, ಮೀನು, ನ್ಯಾಯಬೆಲೆ ಅಂಗಡಿ , ಮದ್ಯ, ಪ್ರಾಣಿಗಳ ಮೇವಿನ ಅಂಗಡಿಗಳು ಓಪನ್. ಬೆಳಗ್ಗೆ 6 ರಿಂದ 10 ಗಂಟೆವೆರೆಗೆ ಮಾತ್ರ ಅವಕಾಶ.

ಬ್ಯಾಂಕ್, ಇನ್ಷುರೆನ್ಸ್ ಕಂಪನಿ, ಎಟಿಎಂ ಕೇಂದ್ರಗಳು ತೆರೆಯಲು ಅವಕಾಶವಿದೆ.

ಟೆಲಿಕಾಂ, ಇಂಟರ್‍ನೆಟ್‍, ಕೇಬಲ್ ಸೇವೆಯಲ್ಲಿ ನಿರತರಾಗಿರುವ ಸಿಬ್ಬಂದಿ ಮತ್ತು ಅವರ ವಾಹನಗಳ ಸಂಚಾರಕ್ಕೆ ಅವಕಾಶವಿದೆ.

ಇ – ಕಾಮರ್ಸ್, ಅಗತ್ಯ ಸರಕುಗಳ ಪೂರೈಕೆ, ಉತ್ಪಾದನೆ, ಗೋದಾಮುಗಳು ತೆಗೆಯಲು ಅವಕಾಶವಿದೆ.

ವಿದ್ಯುತ್ ಉತ್ಪಾದನೆ, ಸರಬರಾಜು ಸಂಬಂಧ ಚಟುವಟಿಕೆಗೆ ಅವಕಾಶ.

ಆರೋಗ್ಯ ಕ್ಷೇತ್ರ, ಮೆಡಿಕಲ್ ಸಿಬ್ಬಂದಿ, ಮೆಡಿಕಲ್ ಶಾಪ್‍ಗಳನ್ನು ತೆಗೆಯಬಹುದು. ಆಯುಷ್, ಪಶು ಆರೋಗ್ಯ ಕೇಂದ್ರ, ಲ್ಯಾಬ್, ಕ್ಲಿನಿಕ್‍, ಬ್ಲಡ್  ಬ್ಯಾಂಕ್ ಸೇರಿದಂತೆ ಆರೋಗ್ಯ ಸೇವೆ ಸಂಬಂಧ ಎಲ್ಲಾ ಚಟುವಟಿಕೆಗೆ ಅವಕಾಶ.

ಮುದ್ರಣ, ದೃಶ್ಯ ಮಾಧ್ಯಮಗಳ ಕಾರ್ಯಚಟುವಟಿಕೆ ನಿರ್ಬಂಧ ಅನ್ವಯವಾಗದು.

ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆ, ಅಂಗಡಿ , ಗೋದಾಮು ತೆಗೆಯಲು ಅವಕಾಶವಿದೆ. ನರೇಗಾ ಕೆಲಸಗಳು ಮುಂದುವರೆಸಬಹುದು.

ಅನಾಥಾಶ್ರಮ, ವೃದ್ಧಾಶ್ರಮ, ಆರೈಕೆ ಕೇಂದ್ರಗಳು, ಮೇಲ್ವಿಚಾರಣೆ ಕೇಂದ್ರಗಳ ಕಾರ್ಯಚಟುವಟಿಕೆಗೆ ನಿರ್ಬಂಧವಿಲ್ಲ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಲ್‍ ಟಿಕಟ್‍ ಪ್ರದರ್ಶಿಸಿ ಸಂಚರಿಸಬಹುದು. ಇವುಗಳನ್ನೆ ಪಾಸ್ ರೀತಿ ಉಪಯೋಗಿಸಬಹುದು. ಇಂತಹ ವಿದ್ಯಾರ್ಥಿಗಳ ಓಡಾಟಕ್ಕೆ ಆಟೋ, ಕ್ಯಾಬ್ ಬಳಸಬಹುದು.

ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿರುವ ಕಾರ್ಮಿಕರು ಆಯಾ ಕಂಪನಿ ಒದಗಿಸಿರುವ ಐಡಿ ಕಾರ್ಡ್ ಹೊಂದಿದ್ದು, ಓಡಾಡಬಹುದು.

ಅನುಮತಿ ಇರುವ ಸರ್ಕಾರಿ ಅಧಿಕಾರಿಗಳು ಸಂಚರಿಸಬಹುದು. ಅಗತ್ಯವಿದ್ದಾಗ ಐಡಿ ಕಾರ್ಡ್ ಪ್ರದರ್ಶಿಸಬಹುದು.

ರೋಗಿಗಳು, ಅವರ ಸಂಬಂಧಿಗಳು, ಆಸ್ಪತ್ರೆಗೆ ತೆರಳುವವರಿಗೆ ಯಾವುದೆ ನಿರ್ಬಂಧವಿಲ್ಲ.

ಕ್ರೀಡಾಂಗಣಗಳಲ್ಲಿ ಕ್ರೀಡಾ ತರಬೇತಿಗೆ ಅವಕಾಶ. ಕ್ರೀಡಾಪಟುಗಳು, ತರಬೇತುದಾರರು ಮಾತ್ರ ಇರಬೇಕು. ಪ್ರೇಕ್ಷಕರಿಗೆ ಅಕಾಶವಿಲ್ಲ. ಸ್ವಿಮ್ಮಿಂಗ್ ಫೆಡರೇಷನ್‍ನಿಂದ ಅನುಮತಿ ಪಡೆದ ಸ್ವಿಮ್ಮಿಂಗ್ ಪೂಲ್‍ಗಳಿಗೆ ಮಾತ್ರ ಅವಕಾಶ.

ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ ದಳ, ಬಂಧೀಖಾನೆ, ಅಗ್ನಿಶಾಮಕ, ತರ್ತು ಸೇವೆಗೆಳಿಗೆ ಅವಕಾಶ. ಉಪ ನೋಂದಣಾಧಿಕಾರಿ, ಕಂದಾಯ ಇಲಾಖೆಗಳಿಗೆ ಮಾತ್ರಅವಕಾಶ.

ಅಗತ್ಯ ಸೇವೆಗಳನ್ನು ಒದಗಿಸುವ ವಿದ್ಯುತ್, ನೀರು, ನೈರ್ಮಲ್ಯ, ನಗರ ಸ್ಥಳೀಯ ಸಂಸ್ಥೆಗಳು, ಡಿಸಿ ಕಚೇರಿ, ಕೆಳ ಹಂತದ ಕೆಲವು ಕಚೇರಿಗಳು, ಖಜಾನೆ ಕಚೇರಿ, ಅರಣ್ಯ ಇಲಾಖೆ ಘೋಷಿಸಿದ ಇಲಾಖೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

ಹೈಕೋಟ್ ಸೂಚನೆ ಮೇರೆಗೆ ಕೋರ್ಟು ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಕಚೇರಿಗಳು ಕರ್ತವ್ಯ ನಿರ್ವಹಿಸಬಹುದು.

ಏನೆಲ್ಲ ಇರುವುದಿಲ್ಲ?

ರೈಲು, ವಿಮಾನ ಸೇವೆ ಹೊರತು ಬಸ್ಸು, ಆಟೋ, ಕ್ಯಾಬ್ ಸೇರಿದಂತೆ ಖಾಸಗಿ ವಾಹನಗಳ ಸಂಚಾರ ನಿರ್ಬಂಧ. ತುರ್ತು ಸಂದರ್ಭ ಮಾತ್ರ ವಾಹನಗಳು ರಸ್ತೆಗಿಳಿಯಬಹುದು.

ಶಾಲೆ, ಕಾಲೇಜಗಳು ಇಲ್ಲ. ಆನ್‍ಲೈನ್ ಕ್ಲಾಸ್ ನಡೆಸಲು ಅವಕಾಶ. ನಿಗದಿಯಾಗಿರುವ ಪರೀಕ್ಷೆಗಳನ್ನು ಕೋವಿಡ್ ನಿಯಮಾನುಸಾರ ನಡೆಸಬಹುದು.

ಚಿತ್ರಮಂದಿರ, ಜಿಮ್, ಸ್ಪಾ, ಶಾಪಿಂಗ್ ಮಾಲ್, ಯೋಗ ಕೇಂದ್ರ, ಮನರಂಜನಾ ತಾಣ, ಅಮ್ಯೂಸ್‍ಮೆಂಟ್ ಪಾರ್ಕ್, ಕ್ಲಬ್, ಬಾರ್, ಆಡಿಟೋರಿಯಂಗಳು ಬಂದ್.

ಸಾಮಾಜಿಕ, ರಾಜಕೀಯ, ಕ್ರೀಡೆ, ಸಾಂಸ್ಕೃತಿಕ, ಮನರಂಜನೆ, ಶಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ.

ದೇವಸ್ಥಾನ, ಚರ್ಚು, ಮಸೀದಿ ಸೇರಿ ಸರ್ವಧರ್ಮ ಕ್ಷೇತ್ರಗಳು ಬಂದ್‍. ಪೂಜೆ ಸಲ್ಲಿಸಲು ಅರ್ಚಕರಿಗೆ ಮಾತ್ರ ಅವಕಾಶ.

ಹೆಚ್ಚು ಜನರು ಸೇರುವ ಹಿನ್ನೆಲೆ ಗಾರ್ಮೆಂಟ್ಸ್‍ಗಳಿಗೂ ನಿರ್ಬಂಧ ವಿಧಿಸಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 27, 2021

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

Leave a Comment