ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ: ನಗರದ ಶಕ್ತಿಧಾಮ ಲೇಔಟ್‌ನಲ್ಲಿ ನಿರ್ಮಾಣ ಹಂತದ ಮನೆಯೊಂದರಲ್ಲಿ ಸುಮಾರು ₹2.50 ಲಕ್ಷ ಮೌಲ್ಯದ ವಿದ್ಯುತ್ ವಯರ್‌ಗಳನ್ನು (electrical wires) ಕಳ್ಳತನ ಮಾಡಲಾಗಿದೆ.

ಪ್ರಾಧ್ಯಾಪಕ ರಾಕೇಶ್ ಅವರು ಶಕ್ತಿಧಾಮ ಲೇಔಟ್‌ನಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ವಿದ್ಯುತ್ ವಯರ್ ಅಳವಡಿಸುವ ಕೆಲಸ ಪೂರ್ಣಗೊಂಡಿತ್ತು. ಕೆಲಸಗಾರರು ಹೋದ ನಂತರ ರಾಕೇಶ್ ಅವರು ಮನೆಗೆ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಿಗ್ಗೆ 6 ಗಂಟೆಗೆ ಬಂದು ನೋಡಿದಾಗ ಕಟಿಂಗ್ ಮೆಷಿನ್ ವೈಯರ್ ಕಟ್ ಆಗಿರುವುದು ಕಂಡುಬಂದಿದೆ. ನಂತರ ಎಲೆಕ್ಟ್ರೀಷಿಯನ್ ಬಂದು ಪರಿಶೀಲಿಸಿದಾಗ, ಮನೆಯ ಸೀಲಿಂಗ್ ಮತ್ತು ಇತರ ಭಾಗಗಳಿಗೆ ಅಳವಡಿಸಿದ್ದ ಎಲ್ಲಾ ವಿದ್ಯುತ್ ವೈಯರ್‌ಗಳನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ.

301123-Shimoga-Rural-Police-Station.webp

301123-Shimoga-Rural-Police-Station.webp

ಇದನ್ನೂ ಓದಿ – ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ಅನುಮಾನಗೊಂಡ ರಾಕೇಶ್ ಅವರು ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ, ಮಾರ್ಚ್ 6ರ ರಾತ್ರಿ ಸುಮಾರು 11:15ರ ಹೊತ್ತಿಗೆ ಇಬ್ಬರು ಕಳ್ಳರು ಮೆಟ್ಟಿಲುಗಳ ಮೂಲಕ ಮನೆಯೊಳಗೆ ನುಗ್ಗಿ ಕೃತ್ಯ ಎಸಗಿರುವುದು ಕಂಡುಬಂದಿದೆ. ಸುಮಾರು ₹2.50 ಲಕ್ಷ ಮೌಲ್ಯದ ವೀಗಾರ್ಡ್ ಕಂಪೆನಿಯ ವಯರ್‌ಗಳನ್ನು ಹೊತ್ತೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunrise Facility Services, Sri sai Trust Shimoga

Leave a Comment