ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020
ಕರೋನ ಕುರಿತು ಜಾಗೃತಿ ಮೂಡಿಸಲು ಶಿವಮೊಗ್ಗದ ಕಲಾವಿದರು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ತಮ್ಮ ಕುಂಚದ ಮೂಲಕ ರಸ್ತೆ ಮೇಲೆಯೆ ಜಾಗೃತಿ ಪೇಂಟಿಂಗ್ ಅರಳಿಸಿದ್ದಾರೆ.

ರಾಜ್ಯ ನಾಮಫಲಕ ಕಲಾವಿದರ ಸಂಘದ ವತಿಯಿಂದ ಗೋಪಿ ಸರ್ಕಲ್’ನಲ್ಲಿ ಕರೋನ ಜಾಗೃತಿ ಪೇಟಿಂಗ್ ಮಾಡಲಾಗಿದೆ. ಕರೋನ ಮಹಾಮಾರಿ ಜಗತ್ತನ್ನು ಆವರಿಸುತ್ತಿರುವ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.
ಕಾರಣವಿಲ್ಲದೆ ಮನೆಯಿಂದ ಹೊರಗೆ ಸುತ್ತಾಡುವವರಿಗೆ ಎಚ್ಚರಿಕೆ ಸಂದೇಶವನ್ನು ಬರೆಯಲಾಗಿದೆ. ಕಾರಣವಿಲ್ಲದೆ ಹೊರಗೆ ಬಂದರೆ ನೀವು, ನಿನ್ನ ಮನೆಗೆ ಬರುವೆ ನಾನು ಎಂದು ವಾರ್ನಿಂಗ್ ನೀಡಲಾಗಿದೆ. ವಿಭಿನ್ನವಾಗಿರುವ ಈ ಜಾಗೃತಿ ಸಂದೇಶ ಗಮನ ಸೆಳೆಯುತ್ತಿದೆ.
ನಾಮಫಲಕ ಕಲಾವಿದರ ಸಂಘದ ಹಲವರು ಈ ಸಂದೇಶ ಚಿತ್ರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

- ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

- ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

- ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು
















