ಕೆಲಸಕ್ಕೆ ಅಂತಾ ಶಿಕಾರಿಪುರದಿಂದ ಹೋಗಿದ್ದವ್ರು ಲಾಕ್‌ಡೌನ್‌ನಲ್ಲಿ ಲಾಕ್, ಜೀವನ ನಡೆಸೋಕೆ ಕಷ್ಟ ಕಷ್ಟ ಅಂದಾಗ ನೆರವಾದರು ಸಿಎಂ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIKARIPURA | 1 ಮೇ 2020

ಲಾಕ್‌ಡೌನ್‌ ಪರಿಣಾಮ ಒಂದು ತಿಂಗಳಿಂದ ದಕ್ಷಿಣ ಕನ್ನಡದಲ್ಲಿ ಸಿಲುಕಿದ್ದ ಕುಟುಂಬವೊಂದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವಾಗಿದ್ದಾರೆ. ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದ ಕುಟುಂಬವನ್ನು, ತವರೂರಿಗೆ ತಲುಪಿಸಿದ್ದಾರೆ ಸಿಎಂ.

ಶಿಕಾರಿಪುರದ ಓರ್ವ ಗರ್ಭಿಣಿ ಮತ್ತು ಆಕೆಯ ಕುಟುಂಬದವರು ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗ್ರಾಮದಲ್ಲಿ ಸಿಕ್ಕಿಬಿದ್ದಿದ್ದರು. ಒಂದು ತಿಂಗಳಿಂದ ಈ ಕುಟುಂಬ ಇಲ್ಲಿನ ಶಾಲೆಯಲ್ಲಿ ಉಳಿದುಕೊಂಡಿತ್ತು. ಆದರೆ ಜೀವನ ನಿರ್ವಹಣೆ ಕಷ್ಟಕರವಾದ ಹಿನ್ನೆಲೆ, ತಮ್ಮೂರಿಗೆ ತೆರಳಲು ಅವಕಾಶ ನೀಡೇಕು. ಇಲ್ಲವಾದರೆ  ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಕುಟುಂಬವನ್ನು ಶಿಕಾರಿಪುರಕ್ಕೆ ಕಳುಹಿಸಿಕೊಡುವಂತೆ ಸಿಎಂ ಸೂಚಿಸಿದ್ದರು.

181218 Yedyurappa at Shivamogga BSY 1 1

ಶಿಕಾರಿಪುರಕ್ಕೆ ಹೇಗೆ ಬಂತು ಈ ಕುಟುಂಬ?

ಗರ್ಭಿಣಿ ಸೇರಿ ಏಳು ಮಂದಿಯನ್ನು ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಶಿಕಾರಿಪುರಕ್ಕೆ ಕಳುಹಿಸಬೇಕು ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದರು. ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಇದರ ಉಸ್ತುವಾರಿ ನೀಡಲಾಗಿತ್ತು. ಅದರಂತೆ ಆ ಕುಟುಂಬ ಶಿಕಾರಿಪುರಕ್ಕೆ ಬಂದಿದ್ದು, ತಮ್ಮೂರಿಗೆ ತಲುಪಿದ್ದಾರೆ.

ಕೆಲಸಕ್ಕೆಂದು ಈ ಕುಟುಂಬ ದಕ್ಷಿಣ ಕನ್ನಡಕ್ಕೆ ತೆರಳಿತ್ತು. ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ಲಾಕ್‌ಡೌನ್‌ ಘೋಷಣೆಯಾಗಿ, ಅಲ್ಲಿಯೇ ಉಳಿಯುವಂತಾಯಿತು. ಆದರೆ ಜೀವನ ನಿರ್ವಹಣೆ ಕಷ್ಟ ಮತ್ತು ಗರ್ಭಿಣಿಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯೋಚಿಸಿದ್ದರು.

95132241 857973851349193 1704349070090305536 n.jpg? nc cat=109& nc sid=dd9801& nc ohc=P I5w 5gfgcAX 79J3x& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment