ಶಿವಮೊಗ್ಗ ಲೈವ್.ಕಾಂ | SHIMOGA | 5 ಮೇ 2020
ಶಿವಮೊಗ್ಗದಲ್ಲಿ ಸೋಮವಾರದಿಂದ KSRTC ಬಸ್ ಸಂಚಾರ ಆರಂಭವಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಈ ಬಸ್‍ಗಳು ಸಂಪರ್ಕ ಕಲ್ಪಿಸಲಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸರತಿ ಸಾಲು, ಸಾಮಾಜಿಕ ಅಂತರ
ಪ್ರಯಾಣಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು, ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ವೃತ್ತಗಳನ್ನು ಬರೆಯಲಾಗಿತ್ತು. ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಈ ಸರ್ಕಲ್‍ನ ಒಳಗೆ ನಿಲ್ಲಿಸಲಾಗುತ್ತಿತ್ತು. ಪ್ರತಿ ಪ್ರಯಾಣಿಕರಿಗೂ ಪರೀಕ್ಷೆ ಬಳಿಕ ಬಸ್ ಹತ್ತಲ ಅವಕಾಶ ಕಲ್ಪಿಸಲಾಗಿತ್ತು.
ಪ್ರಯಾಣಿಕರ ಮಾಹಿತಿ, ಸ್ಯಾನಿಟೈಸರ್
ಇನ್ನು, ಬಸ್ ಹತ್ತುವ ಪ್ರತಿ ಪ್ರಯಾಣಿಕರ ಮಾಹಿತಿಯನ್ನು ಸಂಗ್ರಹಿಸಲಾಯಿತು. ಹೆಸರು, ಮೊಬೈಲ್ ನಂಬರ್ ಬರೆದುಕೊಳ್ಳಲಾಯಿತು. ಅಲ್ಲದೆ ಬಸ್ ಹತ್ತುವ ಮೊದಲು ಪ್ರಯಾಣಿಕರ ಕೈಗೆ ಸ್ಯಾನಿಟೈಸರ್ ಹಾಕಲಾಯಿತು.
ಅರ್ಧಕ್ಕರ್ಧ ಸೀಟಿನಲ್ಲಷ್ಟೇ ಪ್ರಯಾಣಿಕರು
ಬಸ್ಸಿನ ಒಳಗೆ ಪ್ರಯಾಣಿಕರು ಕೂರುವಾಗಲು ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿತ್ತು. ಮೂರು ಜನ ಕೂರಬೇಕಿದ್ದ ಸೀಟಿನಲ್ಲಿ ಇಬ್ಬರಿಗಷ್ಟೆ ಅವಕಾಶ. ಇನ್ನು ಎರಡು ಮಂದಿ ಕೂರುವ ಸೀಟಿನಲ್ಲಿ ಒಬ್ಬರು ಮಾತ್ರ ಕೂರಬೇಕಿತ್ತು.
ಎಲ್ಲ ತಾಲೂಕಿಗೆ ಹೋದ ಬಸ್ಸುಗಳು
ಶಿವಮೊಗ್ಗದಿಂದ ಎಲ್ಲ ತಾಲೂಕಿಗು ಬಸ್ಸಿನ ವ್ಯವಸ್ಥೆ ಮಾಡುವುದಾಗಿ ಸಾರಿಗೆ ನಿಗಮ ತಿಳಿಸಿತ್ತು. ಈ ಹಿನ್ನೆಯಲ್ಲಿ ಶಿವಮೊಗ್ಗದಿಂದ ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಸೊರಬ, ಶಿಕಾರಿಪುರಕ್ಕೆ ಬಸ್ಸುಗಳು ತೆರಳಿವೆ. ಪ್ರಯಾಣಿಕರ ಸಂಖ್ಯೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡಲಾಯಿತು.
ಮೊದಲ ದಿನ ಎಷ್ಟು ಬಸ್ ಸಂಚಾರ?
ಮೊದಲ ದಿನ 43 ಬಸ್‌ಗಳು ಸಂಚಾರ ಮಾಡಿವೆ. ಶಿವಮೊಗ್ಗದಿಂದ ಸಾಗರ, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿಗೆ ಹೆಚ್ಚಿನ ಪ್ರಯಾಣಿಕರು ತೆರಳಿದ್ದಾರೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]