ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಮೇ 2020
ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಗುಡುಗು, ಗಾಳಿ ಸಹಿತ ಮಳೆ ಸುರಿಯುತ್ತಿದೆ. ಕೆಲವು ಕಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿದ ವರದಿಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾವ್ಯಾವ ಗ್ರಾ. ಪಂ. ವ್ಯಾಪ್ತಿಯಲ್ಲಿ ಎಷ್ಟು ಮಳೆಯಾಗಿದೆ?
ಶಿವಮೊಗ್ಗ ಜಿಲ್ಲೆಯ ಕೋಟೆಗಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಮಿ.ಮೀ, ತೂದೂರು 18 ಮಿ.ಮೀ, ಹರಮಘಟ್ಟ 12 ಮಿ.ಮೀ, ಮಲ್ಲಾಪುರ 18 ಮಿ.ಮೀ, ಕನ್ಲೆ 7 ಮಿ.ಮೀ, ಬಾಳೂರು 8 ಮಿ.ಮೀ, ಹೊಸಹಳ್ಳಿ 16 ಮಿ.ಮೀ, ಅಬ್ಬಲಗೆರೆ 24 ಮಿ.ಮೀ, ಕಲ್ಮನೆ 2 ಮಿ.ಮೀ, ಶಿಗ್ಗಾ 20 ಮಿ.ಮೀ, ಅಮೃತ 33 ಮಿ.ಮೀ, ಸೋನಲೆ 30 ಮಿ.ಮೀ, ರಾಮನಗರ 16 ಮಿ.ಮೀ ಮಳೆಯಾಗಿದೆ.
ಅಚಾಪುರ 11 ಮಿ.ಮೀ, ಚಿಕ್ಕಜಂಬೂರು 5 ಮಿ.ಮೀ, ಎಣ್ಣೆಕೊಪ್ಪ 15 ಮಿ.ಮೀ, ಆರಗ 10 ಮಿ.ಮೀ, ಅಂಬರಗೊಪ್ಪ 12 ಮಿ.ಮೀ, ಕುಬಟೂರು 22 ಮಿ.ಮೀ, ಮಂಚಿಕೊಪ್ಪ 18 ಮಿ.ಮೀ, ತಾಳಗುಂದ 6 ಮಿ.ಮೀ, ಹಾದಿಗಲ್ಲು 10 ಮಿ.ಮೀ, ಹಾರೋಗೊಪ್ಪ 24 ಮಿ.ಮೀ, ತಲವಟ 3 ಮಿ.ಮೀ, ಉದ್ರಿ 5 ಮಿ.ಮೀ, ಭೀಮನಕೋಣೆ 10 ಮಿ.ಮೀ, ಬೆಜ್ಜವಳ್ಳಿ 29 ಮಿ.ಮೀ, ಹಿರೆನಲ್ಲೂರು 2 ಮಿ.ಮೀ, ಮುಡುಬ ಸಿದ್ದಾಪುರ 10 ಮಿ.ಮೀ, ಬಸವಾನಿ 11 ಮಿ.ಮೀ, ಸಾಲ್ಗಡಿ 28 ಮಿ.ಮೀ, ಕನ್ನಂಗಿ 27 ಮಿ.ಮೀ, ಅರಳಸುರಳಿ 15 ಮಿ.ಮೀ, ಕೈರಕುಂಡ 8 ಮಿ.ಮೀ, ಮತ್ತಿಮನೆ 2 ಮಿ.ಮೀ, ಹನುಮಂತಪುರ 20 ಮಿ.ಮೀ ಮಳೆಯಾಗಿದೆ.
ಸನ್ಯಾಸಿಕೋಡಮೊಗ್ಗೆ 18 ಮಿ.ಮೀ, ಯಡಜಿಗಳೆಮನೆ 2 ಮಿ.ಮೀ, ದೂಗೂರು 3 ಮಿ.ಮೀ, ಅಂಡಿಗೆ 11 ಮಿ.ಮೀ, ರಾಮಚಂದ್ರಾಪುರ 82 ಮಿ.ಮೀ, ಮಾವಿನಕೆರೆ 30 ಮಿ.ಮೀ, ಕೊರ್ಲಹಳ್ಳಿ 43 ಮಿ.ಮೀ, ಅರಳಹಳ್ಳಿ 16 ಮಿ.ಮೀ, ಕಲ್ಲಿಹಾಳ್ 23 ಮಿ.ಮೀ, ಕೂಡ್ಲಿ 8 ಮಿ.ಮೀ, ವೀರಾಪುರ 4 ಮಿ.ಮೀ, ಕೊನಗವಳ್ಳಿ 16 ಮಿ.ಮೀ, ಸಿಂಗನಮನೆ 18 ಮಿ.ಮೀ, ಯರೆಹಳ್ಳಿ 23 ಮಿ.ಮೀ, ಬಿದರೆ 12 ಮಿ.ಮೀ, ಹೆದ್ದೂರು 21 ಮಿ.ಮೀ, ಸೂಗೂರು 6 ಮಿ.ಮೀ, ದೊಣಬಘಟ್ಟ 18 ಮಿ.ಮೀ, ಹಸೂಡಿ 13 ಮಿ.ಮೀ, ಕಡೇಕಲ್ಲು 15 ಮಿ.ಮೀ, ಹೊಳೆಬೆನವಳ್ಳಿ 11 ಮಿ.ಮೀ, ಸೈದರಕಲ್ಲಹಳ್ಳಿ 22 ಮಿ.ಮೀ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ರಸ್ತೆ ಮೇಲೆ ನೀರು, ಧರೆಗುರುಳಿದ ಮರಗಳು
ಜೋರು ಮಳೆಯಿಂದಾಗಿ ಚರಂಡಿಯಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿದಿದೆ. ಇದರಿಂದ ಚರಂಡಿಯಲ್ಲಿದ್ದ ಕಸವೆಲ್ಲ ರಸ್ತೆಗೆ ಬಂದಿದೆ. ಸೊರಬ ತಾಲೂಕಿನ ಹಿರೇಕಸವಿ ಗ್ರಾಮದಲ್ಲಿ ಭಾನುವಾರ ಸುರಿದ ಭಾರಿ ಮಳೆ, ಬೀಸಿದ ಗಾಳಿಗೆ ಮನೆಗಳ ಚಾವಣೆ ಹಾರಿಹೋಗಿದೆ. ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿರುವ ವರದಿಯಾಗಿದೆ.
ಚಂಡುಮಾರುತದ ಪರಿಣಾಮ
ರಾಜ್ಯದ ವಿವಿಧೆಡೆ ಮಳೆಗೆ ಕಾರಣವಾಗಿರುವುದು ಅಂಫಾನ್ ಚಂಡಮಾರುತ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿ ಸುಮುದ್ರದ ಮೇಲ್ಮೈ ಗಾಳಿಯಿಂದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಮೇ 19ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]