ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020
ಪೇಷೆಂಟ್ ನಂಬರ್ 1305 ಕೇಸ್ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಇವರಿಗೆ ಕರೋನ ಸೋಂಕು ತಗುಲಿದ್ದು ಹೇಗೆ ಅನ್ನುವುದು ಈತನಕ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹಾಗಾಗಿ ಸೋಂಕು ಮತ್ತಷ್ಟು ಜನಕ್ಕೆ ಹರಡಬಹುದೆ ಎಂಬ ಅನುಮಾನ ಮೂಡಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ತಾಲೂಕು ಬಾಳೆಕೊಪ್ಪ ಗ್ರಾಮದ ಪಿ1305 ಅವರಿಗೆ ಸೋಂಕು ತಗುಲಿರುವ ಕುರಿತು ನಿನ್ನೆ ಸ್ಟೇಟ್ ಬುಲೆಟಿನ್‍ನಲ್ಲಿ ಪ್ರಕಟಿಸಲಾಗಿದೆ. ಇವರಿಗೆ 63 ವರ್ಷ ವಯಸ್ಸು. ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೋಂಕು ತಗುಲಿದ್ದು ಹೇಗೆ?
ಪಿ1305 ಅವರು ಇತ್ತೀಚೆಗೆ ದಾವಣಗೆರೆ ಜಿಲ್ಲೆಗೆ ಹೋಗಿ ಬಂದಿದ್ದಾರೆ. ಚಿಕಿತ್ಸೆಗೆಂದು ಅಲ್ಲಿಗೆ ತೆರಳಿದ್ದರು. ಈ ವೇಳೆ ಸೋಂಕು ತಗುಲಿರುವ ಕುರಿತು ಅನುಮಾನವಿದೆ. ಆದರೆ ಇದು ಇನ್ನು ಖಚಿತಗೊಂಡಿಲ್ಲ. ದಾವಣಗೆರೆಗೆ ಹೋಗಿ ಬಂದಿದ್ದು ತಿಳಿದ ಬಳಿಕ ಇವರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಆದರೆ ಇದಕ್ಕೂ ಮೊದಲು ಪಿ1305 ಅವರು ಗ್ರಾಮದಲ್ಲೆಲ್ಲ ಓಡಾಡಿದ್ದರು.
ಗ್ರಾಮದ ಹಾಲಿನ ಡೈರಿಗೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಹಲವರನ್ನು ಭೇಟಿಯಾಗಿದ್ದರು ಎಂದು ತಿಳಿದು ಬಂದಿದೆ. ಈ ನಡುವೆ ಊಹಾಪೋಹಗಳು ಕೂಡ ಹಬ್ಬಿದೆ. ಇದರಿಂದ ಜನರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
ಅಧಿಕಾರಿಗಳಿಗೆ ತಲೆನೋವು ತಂದ ಕೇಸ್
ಪಿ1305 ಅವರ ಪ್ರಕರಣ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಸೋಂಕು ತಗುಲಿದ್ದು ಹೇಗೆ ಅನ್ನವುದನ್ನು ಪತ್ತೆ ಹಚ್ಚುವುದೆ ಕಷ್ಟವಾಗಿದೆ. ಒಂದು ವೇಳೆ ಸ್ಥಳೀಯವಾಗಿ ಕರೋನ ಸೋಂಕು ತಗುಲಿದ್ದರೆ ಇದು ದೊಡ್ಡ ಆತಂಕ ಸೃಷ್ಟಿಸಲಿದೆ. ಈ ಹಿನ್ನೆಲೆಯಲ್ಲಿ ಬಾಳೆಕೊಪ್ಪ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]