ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 24 ಜೂನ್ 2020
ಮುಂಬೈಗೆ ಹೋಗಿ ಭದ್ರಾವತಿಗೆ ಹಿಂತಿರುಗಿದ್ದ ಮಹಿಳೆಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಭದ್ರಾವತಿಯ ಮತ್ತೊಂದು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಬಾಣಂತನ ಮಾಡಲು ಹೋಗಿದ್ದರು
ಸಹೋದರಿಯ ಬಾಣಂತನ ಮಾಡಲು ಈ ಮಹಿಳೆ ಮುಂಬೈಗೆ ತೆರಳಿದ್ದರು. ಜೂನ್ 18ರಂದು ಇವರು ಭದ್ರಾವತಿಗೆ ಹಿಂತಿರುಗಿದ್ದರು. ಮುಂಬೈನಿಂದ ಹಿಂತಿರುಗಿದ್ದ ಕಾರಣ ಜೂ.19ರಂದು ಸಾರ್ವಜನಿಕ ಆಸ್ಪತ್ರೆಗೆ ಹೋಗಿ, ಸ್ವಪ್ರೇರಣೆಯಿಂದ ಕರೋನ ಪರೀಕ್ಷೆಗೆ ಒಳಗಾಗಿದ್ದರು. ಮುಂಬೈನಿಂದ ಬಂದಿದ್ದರಿಂದ ಇವರನ್ನು ವೈದ್ಯರು ಕ್ವಾರಂಟೈನ್‍ನಲ್ಲಿ ಇರಿಸಿದ್ದರು.
ಕುಟುಂಬದವರ ಮೇಲೆ ನಿಗಾ
ಸೋಂಕಿತ ಮಹಿಳೆ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದವರ ಮೇಲೆ ನಿಗಾ ವಹಿಸಲಾಗಿದೆ. ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಪತಿಯನ್ನು ಮಾತ್ರ ಪ್ರಾಥಮಿಕ ಸಂಪರ್ಕ ಎಂದು ಗುರುತಿಸಲಾಗಿದೆ.

ಏರಿಯಾ ಸೀಲ್ ಡೌನ್
ಮಹಿಳೆಗೆ ಕರೋನ ಕಾಣಿಸಿಕೊಂಡ ಹಿನ್ನೆಲೆ ಕಾಗದ ನಗರದಲ್ಲಿ ಮಹಿಳೆಯ ಮನೆ ಇರುವ ಕ್ರಾಸ್ ಅನ್ನು ಸೀಲ್ ಡೌನ್ ಮಾಡಲಾಗಿದೆ. ಈ ರಸ್ತೆಯಲ್ಲಿ ಜನ ಸಂಚಾರ ನಿರ್ಬಂಧಿಸಲಾಗಿದ್ದು, ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಕಂಟೈನ್ಮೆಂಟ್ ಜೋನ್‍ಗೆ ಉಪ ವಿಭಾಗಾಧಿಕಾರಿ ಪ್ರಕಾಶ್, ತಹಶೀಲ್ದಾರ್ ಶಿವಕುಮಾರ್, ನಗರ ಸಭೆ ಪೌರಾಯುಕ್ತ ಮನೋಹರ್, ಪರಿಸರ ಎಂಜಿನಿಯರ್ ರುದ್ರೇಗೌಡ, ಟಿಹೆಚ್ಓ ಡಾ.ಎಂ.ಆರ್.ಗಾಯತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

- ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

- ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್ 2026

- ಗಾಂಧಿ ಬಜಾರ್ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್, ಏನಿದು ಕೇಸ್?

- ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

About The Editor
ನಿತಿನ್ ಆರ್.ಕೈದೊಟ್ಲು
















