ಬಸ್ಸಲ್ಲಿ ಪಾಲಿಕೆಗೆ ಬಂದು ಕಾರಲ್ಲಿ ಮನೆಗೆ ಹಿಂತಿರುಗಿದ್ರು..! ಅಧಿಕಾರ ಸಿಕ್ಕರೂ ಹತ್ತು ನಿಮಿಷ ಎಣಿಸಿ ಕುರ್ಚಿ ಏರಿದರು..!

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | 28 ನವೆಂಬರ್ 2018

ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ ಅನೇಕ ಸ್ವಾರಸ್ಯಕರ ಮತ್ತು ಕೂತಹಲಕಾರಿ ಸಂಗತಿಗಳಿಗೆ ಸಾಕ್ಷಿಯಾಯ್ತು.

FOUR LAKH VIEWS copy

ಬಸ್ಸಲ್ಲಿ ಬಂದಿಳಿದ ಬಿಜೆಪಿ ಸದಸ್ಯರು

ಪಾಲಿಕೆಯ ಬಿಜೆಪಿ ಸದಸ್ಯರು ಬಿಜೆಪಿ ಕಚೇರಿಯಿಂದ ಪಾಲಿಕೆವರೆಗೂ ಪ್ರತ್ಯೇಕ ಬಸ್’ನಲ್ಲಿ ಬಂದರು. ಬಸ್ಸಿನಿಂದ ಬಂದಿಳಿಯುತ್ತಿದ್ದಂತೆ ಘೋಷಣೆಗಳನ್ನು ಕೂಗಿ, ಸಭಾಂಗಣ ಪ್ರವೇಶಿದರು. ಆದರೆ ಚನ್ನಬಸಪ್ಪ ಅವರು ಪ್ರತ್ಯೇಕವಾಗಿ ಕಾರಿನಲ್ಲಿ ಬಂದರು.

47060089 2162130824048227 771414038037921792 n.jpg? nc cat=100& nc ht=scontent bom1 1

‘ಹೆಣ್ಮಗಳಿಗೆ ಅನ್ಯಾಯ ಮಾಡಬೇಡಿ’

ಚುನಾವಣೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ಶಿವಣ್ಣ ವಿರುದ್ಧವಾಗಿ ಯಾರೆಲ್ಲ ಮತ ಚಲಾಯಿಸುತ್ತಿದ್ದೀರಿ ಎಂದು, ಚುನಾವಣಾಧಿಕಾರಿ ಕೇಳಿದರು. ಆಗ ಬಿಜೆಪಿ ಸದಸ್ಯರೆಲ್ಲ ಕೈ ಎತ್ತಿದರು. ಬಿಜೆಪಿ ಸದಸ್ಯರತ್ತ ತಿರುಗಿದ ಕಾಂಗ್ರೆಸ್ ಸದಸ್ಯ ಯೋಗೇಶ್, ಹೆಣ್ಣು ಮಗಳಿವೆ ಅನ್ಯಾಯ ಮಾಡಬೇಡಿ. ಬೆಂಬಲ ಕೊಡಿ ಅಂತಾ ಮನವಿ ಮಾಡಿದರು. ಇದು ಸಭೆಯನ್ನು ನಗೆಗಡಲಲ್ಲಿ ತೇಲಿಸಿತು.

46847887 2162130857381557 7774355654365413376 n.jpg? nc cat=101& nc ht=scontent bom1 1

ಉಪಮೇಯರ್ ಚುನಾವಣೆಯಲ್ಲೂ ಇದೇ ರೀತಿ ಚುನಾವಣಾಧಿಕಾರಿಗಳು ಘೋಷಿಸಿದಾಗ, ಸಮಾಜದ ಹುಡುಗನನ್ನ ಬೆಂಬಲಿಸಿ. ಚನ್ನಬಸಪ್ಪ ಅವರೇ ನಿಮ್ಮ ನಾಮಪತ್ರ ಹಿಂಪಡೆಯಿರಿ. ಈಶ್ವರಪ್ಪ ಅವರಿದ್ದಾರೆ ಅಂತಾ ಚಿಂತಿಸಬೇಡಿ ಅಂತಾ ಯೋಗೇಶ್ ತಮ್ಮ ಪರ ಪ್ರಚಾರ ಮಾಡಿ, ಮನವಿ ಮಾಡಿಕೊಂಡರು. ಆಗಲೂ ಎಲ್ಲರೂ ನಗುವಂತಾಯ್ತು.

‘ಅಭಿವೃದ್ಧಿ ದೃಷ್ಟಿಯಿಂದ ಹಿಂಪಡೆಯುತ್ತಿದ್ದೇವೆ..!’

46895038 2162130877381555 6873076270746304512 n.jpg? nc cat=111& nc ht=scontent bom1 1

ನಾಲ್ಕು ಸ್ಥಾಯಿ ಸಮಿತಿಗೆ ಆಯ್ಕೆ ನಡೆಯುತ್ತಿದ್ದ ಸಂದರ್ಭ, ಕೆಲಕಾಲ ಗೊಂದಲ ನಿರ್ಮಾಣವಾಯ್ತು.  ಶಾಸಕರಾದ ಈಶ್ವರಪ್ಪ, ರುದ್ರೇಗೌಡ, ಅಶೋಕ್ ನಾಯ್ಕ್, ಪ್ರಸನ್ನಕುಮಾರ್ ಅವರ ಜೊತೆ ಪಾಲಿಕೆ ಸದಸ್ಯರು ಚರ್ಚಿಸಿದರು. ನಂತರ ನಾಗರಾಜ್ ಕಂಕಾರಿ ಅವರು ಸ್ಥಾಯಿ ಸಮಿತಿಯೊಂದಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದರು. ಆಗ ಕಾಂಗ್ರೆಸ್ ಸದಸ್ಯ ರಮೇಶ್ ಹೆಗ್ಡೆ, ಅಭಿವೃದ್ಧಿ ದೃಷ್ಟಿಯಿಂದ ಹಿಂಪಡೆಯುತ್ತಿದ್ದೇವೆ ಅಂತಾ ಹಾಸ್ಯ ಚಟಾಕಿ ಹಾರಿಸಿದರು.

‘ನಮ್ಮಮ್ಮನನ್ನ ಚೆನ್ನಾಗಿ ನೋಡಿಕೊಳ್ಳಿ ಸಾರ್..!’

46836963 2162130987381544 1261260791928061952 n.jpg? nc cat=110& nc ht=scontent bom1 1

ಲತಾ ಗಣೇಶ್ ಅವರು ಮೇಯರ್ ಕೊಠಡಿಯಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆ, ಮೇಯರ್ ಲತಾ ಗಣೇಶ್ ಅವರ ಕಿರಿಯ ಮಗಳು, ನಮ್ಮಮ್ಮನ್ನನ್ನು ಚನ್ನಾಗಿ ನೋಡಿಕೊಳ್ಳಿ ಸಾರ್ ಅಂತಾ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಮಾಡಿದಳು. ನಿಮ್ಮಮ್ಮನನ್ನು ನೀನೇ ಚೆನ್ನಾಗಿ ನೋಡಿಕೊಳ್ಳಬೇಕು. ಅವರು ಚೆನ್ನಾಗಿ ಕೆಲಸ ಮಾಡಬೇಕಿದೆ ಅಂತಾ ಹೇಳಿ, ಆ ಜವಾಬ್ದಾರಿಯನ್ನು ಆಕೆಗೆ ವಹಿಸಿದರು ಈಶ್ವರಪ್ಪ.  

ಮೇಯರ್’ಗೆ ರಾಹುಕಾಲದ ಕಾಟ..!

46849224 2162130944048215 4156398658754969600 n.jpg? nc cat=103& nc ht=scontent bom1 1

ಚುನಾವಣೆ ಬಳಿಕ ಮೇಯರ್, ಉಪ ಮೇಯರ್ ಅವರು ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮವಿತ್ತು. ಉಪ ಮೇಯರ್ ಚನ್ನಬಸಪ್ಪ ಅವರು ಅಧಿಕಾರ ಸ್ವೀಕರಿಸಿದರು. ಆದರೆ ಮೇಯರ್ ಲತಾ ಗಣೇಶ್ ಮಾತ್ರ ಹತ್ತು ನಿಮಿಷ ಕಾದರು. ಶಾಸಕ ಈಶ್ವರಪ್ಪ, ಉಪ ಮೇಯರ್ ಚನ್ನಬಸಪ್ಪ ಅವರು ಟೈಂಗಾಗಿ ಕಾದರು. ರಾಹುಕಾಲ ಮುಗಿಯೋವರೆಗೂ ಮೇಯರ್ ಅಧಿಕಾರ ಸ್ವೀಕರಿಸಲಿಲ್ಲ. ಬಳಿಕ, ಮಧ್ಯಾಹ್ನ 1.45ಕ್ಕೆ ಮೇಯರ್ ಲತಾ ಗಣೇಶ್ ಕುರ್ಚಿ ಏರಿದರು.

ಇದನ್ನೂ ಓದಿ | ಬಿಜೆಪಿ ಮಡಿಲಿಗೆ ಶಿವಮೊಗ್ಗ ಪಾಲಿಕೆ ಮೇಯರ್, ಉಪಮೇಯರ್, ಯಾರಿಗೆಷ್ಟು ಓಟ್ ಬಂತು ಗೊತ್ತಾ?

ಬಸ್ಸಲ್ಲಿ ಬಂದವರನ್ನು ಹಿಂಬಾಲಿಸಿದ ಸರ್ಕಾರಿ ಕಾರ್

ಬಸ್ಸಲ್ಲಿ ಪಾಲಿಕೆಗೆ ಬಂದ ಲತಾ ಗಣೇಶ್ ಅವರು ಮನೆಗೆ ಮರಳುವಾಗ ಇನ್ನೋವಾ ಕಾರಿನಲ್ಲಿ ತೆರಳಿದರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೇಯರ್ ಲತಾ ಗಣೇಶ್ ಅವರಿಗೆ ಮಹಾಪೌರರ ಕಾರು ಒದಗಿಸಲಾಯಿತು. ಪಾಲಿಕೆಯಿಂದ ಮೆರವಣಿಗೆಯಲ್ಲಿ ಮೇಯರ್ ಸಾಗುತ್ತಿದ್ದರೆ, ಇನ್ನೋವಾ ಕಾರು ಅವರನನ್ನು ಹಿಂಬಾಲಿಸಿತು.  

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಕರೆ ಮಾಡಿ | 9964634494

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 28, 2018

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

Leave a Comment