ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ಶಿವಮೊಗ್ಗ: ಕಾರು ತೊಳೆಯುವ (car wash) ವಿಚಾರವಾಗಿ ಅಕ್ಕಪಕ್ಕದ ಮನೆಯವರ ಮಧ್ಯೆ ಗಲಾಟೆಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು, ಪ್ರತಿ ದೂರು ನೀಡಿದ್ದಾರೆ.

ಇದನ್ನೂ ಓದಿ – ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಏನಿದು ಪ್ರಕರಣ?

ಶಿವಮೊಗ್ಗದ ಕೃಷಿನಗರದಲ್ಲಿ ಘಟನೆ ನಡೆದಿದೆ. ಕಾರು ಚಾಲಕರೊಬ್ಬರು ತಮ್ಮ ಮನೆಯ ಕಾಂಪೌಂಡ್‌ ಒಳಗೆ ಕಾರು ತೊಳೆಯುತ್ತಾರೆ. ಇದರ ನೀರು ಪಕ್ಕದ ಮನೆಯೊಳಗೆ ಸಿಡಿಯುತ್ತದೆ ಎಂಬ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು. ಈಚೆಗೆ ಇದು ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸಿದ್ದಾರೆ.

301123-Shimoga-Rural-Police-Station.webp

ದೂರುಗಳಲ್ಲಿ ಏನಿದೆ?

ದೂರು 1: ಚಾಲಕನಿಂದ ದೂರು

ಚಾಲಕ ಶನಿವಾರ ರಾತ್ರಿ ಮಂಗಳೂರಿನಿಂದ ವಾಪಸ್ ಬಂದು ತಮ್ಮ ಮನೆಯ ಕಾಂಪೌಂಡ್‌ನಲ್ಲಿ ಕಾರು ತೊಳೆಯುತ್ತಿದ್ದರು. ಈ ವೇಳೆ ನೀರು ತಮ್ಮ ಕಾಂಪೌಂಡಿಗೆ ಸಿಡಿಯುತ್ತಿದೆ ಎಂದು ಪಕ್ಕದ ಮನೆಯವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಪಕ್ಕದ ಮನೆಯವರು ಕಲ್ಲಿನಿಂದ ಹೊಡೆದಿದ್ದಾರೆ. ಇದರಿಂದ ತನ್ನ ತಲೆಗೆ ಗಾಯವಾಗಿದೆ. ಅಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಚಾಲಕ ದೂರಿನಲ್ಲಿ ಆರೋಪಿಸಿದ್ದಾರೆ.

unnamed

ದೂರು 2: ಪಕ್ಕದ ಮನೆಯವರ ಕಂಪ್ಲೇಂಟ್‌

ತಮ್ಮ ಮನೆಯ ಗೋಡೆಯ ಹತ್ತಿರವೇ ಚಾಲಕ ಪದೇ ಪದೇ ಕಾರು ತೊಳೆಯುತ್ತಿದ್ದನು. ಇದರಿಂದ ಮನೆಯ ಗೋಡೆ ಹಾಳಾಗುತ್ತಿದೆ ಮತ್ತು ಕಿಟಕಿಯಿಂದ ಮನೆ ಒಳಗೆ ನೀರು ಬರುತ್ತಿದೆ ಎಂದು ಹಲವು ಬಾರಿ ಬುದ್ಧಿವಾದ ಹೇಳಿದ್ದೆವು. ಶನಿವಾರ ರಾತ್ರಿ ಚಾಲಕ ಮತ್ತೆ ಗೋಡೆಯ ಬಳಿಯೇ ಕಾರು ತೊಳೆಯುತ್ತಿದ್ದಾಗ ಪಕ್ಕದ ಪ್ರಶ್ನಿಸಿದೆವು. ಇದರಿಂದ ಆಕ್ರೋಶಗೊಂಡ ಚಾಲಕ, ಅವಾಚ್ಯವಾಗಿ ನಿಂದಿಸಿ, ಜೋರಾಗಿ ತಳ್ಳಿ ಕೈಯಿಂದ ಗುದ್ದಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಹಣೆಗೆ ಹೊಡೆದಿದ್ದಾನೆ. ಈ ವೇಳೆ ಚಾಲಕನ ತಾಯಿ ಕೂಡ ಬಂದು ಬೈದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪಕ್ಕದ ಮನೆಯ ಹಿರಿಯ ದೂರಿನಲ್ಲಿ ಆರೋಪಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Sunrise Facility Services, Sri sai Trust Shimoga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 18, 2026 at 7:45 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 18, 2026

Leave a Comment