ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಆಗಸ್ಟ್ 2020
ತುಂಗಾ ನದಿ ಅಪಾಯದ ಮಟ್ಟ ಮಿರಿ ಹರಿಯುತ್ತಿದೆ. ನೀರಿನ ಮಟ್ಟ ಹೆಚ್ಚಿದರೆ ಹಳೆ ಶಿವಮೊಗ್ಗ ಜಲಾವೃತ ಆಗಲಿದೆ ಎಂಬ ಆತಂಕವಿದೆ. ಮತ್ತೊಂದೆಡೆ ಹಾವುಗಳು ಕೂಡ ನೀರಿನ ರಭಸಕ್ಕೆ ಬೆಚ್ಚಿಬಿದ್ದು ಮರದ ಮೇಲೆ ಆಶ್ರಯ ಪಡೆದಿವೆ.
ಶಿವಮೊಗ್ಗದ ಬೆಕ್ಕಿನಕಲ್ಮಠದ ಕಾಂಪೌಂಡ್‍ಗೆ ಹೊಂದಿಕೊಂಡಂತೆ ಇರುವ ಮರದಲ್ಲಿ, ಹಾವುಗಳು ರಕ್ಷಣೆ ಪಡೆದುಕೊಂಡಿವೆ. ಸುಮಾರು 20 ಹಾವುಗಳು ಒಂದೆ ಮರದಲ್ಲಿ ಆಶ್ರಯ ಪಡೆದುಕೊಂಡಿವೆ.
ಹಾವುಗಳು ಇರುವುದನ್ನು ಗಮನಿಸಿದ ಜನರು ಕೂಡಲೆ ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್, ಮರದಲ್ಲಿ ಇರುವುದು ವಿಷಪೂರ ಹಾವುಗಳಲ್ಲ ಎಂದು ಸ್ಥಳೀಯರಿಗೆ ಮಾಹಿತಿ ನೀಡಿ, ಧೈರ್ಯ ಹೇಳಿದರು.
ಚರಂಡಿ, ಹೊಳೆ ಸಮೀಪದಲ್ಲಿ ಇದ್ದ ಹಾವುಗಳು, ಕೊನೆಗೆ ನೀರಿನ ರಭಸದಿಂದಾಗಿ ಇಲ್ಲಿಗೆ ತೇಲಿ ಬಂದಿರುವ ಸಾದ್ಯತೆ ಇದೆ. ಯಾವುದೇ ಆಸರೆ ಸಿಗದೆ ಕೊನೆಗೆ ಈ ಮರದಲ್ಲಿ ಆಶ್ರಯ ಪಡೆದಿರಬಹುದು. ಇವುಗಳಿಂದ ಯಾವುದೇ ಅಪಾಯವಿಲ್ಲ ಎಂದು ಸ್ನೇಕ್ ಕಿರಣ್ ತಿಳಿಸಿದರು.
https://www.facebook.com/liveshivamogga/videos/313513999769282/?t=3
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಗಾಂಧಿ ಬಜಾರ್ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್, ಏನಿದು ಕೇಸ್?

- ಸೋಮಿನಕೊಪ್ಪದಲ್ಲಿ ಕಣ್ಮನ ಸೆಳೆದ ಜಾನಪದ ಸಮ್ಮೇಳನ, ಹೇಗಿತ್ತು? ಯಾರೆಲ್ಲ ಭಾಗವಹಿಸಿದ್ದರು?

- ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್

- ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

- ರಾತ್ರಿ 11:45ಕ್ಕೆ ಅಮೀರ್ ಅಹಮದ್ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು
















