SHIMOGA CRIME | 1.78 ಲಕ್ಷ ದೋಖಾ, ಪ್ರತಿಷ್ಠಿತ ಶೂ ಶೋರೂಂ ಮ್ಯಾನೇಜರ್ ವಿರುದ್ಧ ಕೇಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 01 FEBRUARY 2021

ಪ್ರತಿಷ್ಠಿತ ಶೂ ಶೋರೂಂ ಒಂದರ ಮ್ಯಾನೇಜರ್ ಹಣ ದುರುಪಯೋಗ ಪಡಿಸಿಕೊಂಡಿರುವ ಹಿನ್ನೆಲೆ, ದೂರು ದಖಲಾಗಿದೆ. ಶೂ ಕಂಪನಿಗೆ 1.78 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.

ಶಿವಮೊಗ್ಗದ ಮಾಲ್‍ ಒಂದರಲ್ಲಿ  ಇರುವ ಶೂ ಶೋರೂಂನ ಮ್ಯಾನೇಜರ್ ಲೋಕೇಶ್ ಎಂಬುವವರು ಹಣದ ದುರುಪಯೋಗ ಮಾಡಿದ್ದಾರೆ ಎಂದು ಶೂ ಕಂಪನಿ ದೂರು ನೀಡಿದೆ.

ಲೋಕೇಶ್ ಅವರ ವರ್ಗಾವಣೆಯಾಗಿದ್ದು, ನೂತನ ಮ್ಯಾನೇಜರ್ ಬಂದ ಹಿನ್ನೆಲೆ ಅಂಗಡಿಯಲ್ಲಿ ಆಡಿಟ್ ಮಾಡಿಸಲಾಗಿದೆ. ಈ ವೇಳೆ 1.78 ಲಕ್ಷ ರೂ. ಹಣ ದುರುಪಯೋಗ ಆಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೀನಿಯರ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಸುನಿಲ್ ಎಂಬುವವರು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment