SORABA | ವಿದ್ಯುತ್ ಶರ್ಟ್ ಸರ್ಕಿಟ್, ಭತ್ತದ ಬಣವೆ, ಹುಲ್ಲು, ಕಬ್ಬಿನ ಹೊಲ ಭಸ್ಮ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SORABA NEWS | 04 FEBRUARY 2021

ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದಾಗಿ ಭತ್ತದ ಬಣವೆ, ಹುಲ್ಲು, ಕಬ್ಬಿನ ಹೊಲ ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂ ನಷ್ಟವಾಗಿವೆ.

ಸೊರಬ ತಾಲೂಕು ಹರೀಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟಗಳಲೆ ಮತ್ತು ಮಂಡ್ಲಿಕೊಪ್ಪ ಗ್ರಾಮದಲ್ಲಿ  ಘಟನೆ ಸಂಭವಿಸಿದೆ. ವಿದ್ಯುತ್ ಶರ್ಟ್ ಸರ್ಕಿಟ್ ಸಂಭವಿಸಿ, ಕುಂಟಗಳಲೆ ತಿಮ್ಮಪ್ಪ ಅವರ 40 ಕ್ವಿಂಟಾಲ್ ಭತ್ತದ ಬಣವೆ, ಮಂಡ್ಲಿಕೊಪ್ಪದ ಭದ್ರಪ್ಪ ಅವರ ಅರ್ಧ ಎಕರೆ ಕಬ್ಬಿನ ಹೊಲ ಮತ್ತು ರುದ್ರಪ್ಪ ಮಡಿವಾಳ ಅವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಹೊತ್ತಿಕೊಂಡಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ, ಮತ್ತಷ್ಟು ಹಾನಿ ತಪ್ಪಿಸಿದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment