GOOD NEWS | ಹುಟ್ಟುಹಬ್ಬದಂದು ತಮ್ಮೂರಿನ ಸರ್ಕಾರಿ ಶಾಲೆ ಮಕ್ಕಳಿಗೆ ಉಡುಗೊರೆ ಕೊಟ್ಟ ಪೇಟಿಯಂ ಉದ್ಯೋಗಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

148777428 1060284511118125 316230702728352197 n.jpg? nc cat=108&ccb=3& nc sid=730e14& nc ohc=QeUIUJ9S5N8AX 9v4mo& nc oc=AQlBtod963x7nQH13nxyrIwRQvw5RzBZ0PjD0bTVoONhZ Te4qbR5EXZXhuFSocAaXbzyflIDhudnNQElU9b29ej& nc ht=scontent.fblr1 4

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 11 FEBRUARY 2021

ಹುಟ್ಟುಹಬ್ಬದ ಸಂಭ್ರಮ ಅಂದರೆ ಮೋಜು, ಮಸ್ತಿ ಸಾಮಾನ್ಯ ಎಂಬಂತಾಗಿದೆ. ಆದರೆ ಇಲ್ಲೊಬ್ಬರು ತಮ್ಮೂರಿನ ಸರ್ಕಾರಿ ಶಾಲೆಯ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಸಿಕೊಂಡು, ಸಾವಿರಾರು ರುಪಾಯಿಯ ಕ್ರೀಡಾ ಪರಿಕರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

148238247 1326076907753726 9136284305317924003 o.jpg? nc cat=106&ccb=3& nc sid=8bfeb9& nc ohc=AOIvBiP5yyEAX8bAPm6& nc ht=scontent.fblr1 3

ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಹೊನ್ನೆತಾಳು ಗ್ರಾಮದ ಪ್ರಾಥಮಿಕ ಶಾಲೆಗೆ ಕ್ರೀಡಾ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಗಿದೆ.

ಪೇಟಿಯಂ ಸಂಸ್ಥೆಯ ಬೆಂಗಳೂರನ ಉದ್ಯೋಗಿಯಾಗಿರುವ ವಿಶಾಕ್ ಅವರು ತಮ್ಮ ಹುಟ್ಟುಹಬ್ಬದಂದು ಊರಿನ ಶಾಲೆಗೆ ಕೊಡುಗೆ ನೀಡಿದ್ದಾರೆ. ಹುಟ್ಟುಹಬ್ಬದ ದಿನ ಶಾಲೆಯ ಮಕ್ಕಳು, ಸಿಬ್ಬಂದಿಗಳಿಗೆ ಸಿಹಿ ಹಂಚಿ, ಮಕ್ಕಳಿಗೆ ಅನುಕೂಲ ಆಗುವ ಕ್ರೀಡಾ ಪರಿಕರಗಳನ್ನು ಶಾಲೆಗೆ ಕೊಡುಗೆ ನೀಡಿದರು.

ಇದನ್ನೂ ಓದಿ | ಅದ್ಧೂರಿ ಮದುವೆಯ ಹಣ ಶಾಲೆಗೆ ದೇಣಿಗೆ ನೀಡಿದ ತೀರ್ಥಹಳ್ಳಿ ಯುವತಿ

ಎಸ್‍ಡಿಎಂಸಿ ತರಬೇತಿ ನಡೆಯುತ್ತಿದ್ದ ಸಂದರ್ಭ ಈ ಉಡುಗೊರೆ ನೀಡಿದ್ದಾರೆ. ಈ ವೇಳೆ ವಿಶಾಕ್ ಅವರನ್ನು ಶಾಲೆ ವತಿಯಿಂದ ಗೌರವಿಸಲಾಯಿತು.

ಇದನ್ನೂ ಓದಿ |  ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, ಧನ್ಯವಾದ ಶಿವಮೊಗ್ಗ

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉಷಾ, ಸಿಆರ್‍ಪಿ ಕಲಾವತಿ, ಮುಖ್ಯ ಶಿಕ್ಷಕಿ ಸುರೇಖಾ ಶೇಟ್, ಎಸ್‍ಡಿಎಂಸಿ ಅಧ್ಯಕ್ಷ ನಿತ್ಯಾನಂದ ಅಣುಗೋಡು ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

144230336 1320496224978461 7510471834830533837 n.jpg? nc cat=105&ccb=2& nc sid=730e14& nc ohc=jsM9AiKZgQ4AX9sUKjy& nc ht=scontent.fixe1 2

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment