ಶಿವಮೊಗ್ಗದಲ್ಲಿ ಬಾಲಕಿ ಮೇಲೆ ಬೀದಿ ನಾಯಿ ದಾಳಿ, ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ವೈರಲ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 FEBRUARY 2021

ಶಿವಮೊಗ್ಗದಲ್ಲಿ ಬಾಲಕಿಯೊಬ್ಬಳ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿದೆ. ಗಾಯಗೊಂಡಿರುವ ಬಾಲಕಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಶಿವಮೊಗ್ಗದ ಆರ್‍ಎಂಎಲ್ ನಗರದಲ್ಲಿ ಬೀದಿ ನಾಯಿಯೊಂದು ಯಾದೇವಿ (4) ಮೇಲೆ ದಾಳಿ ನಡೆಸಿದೆ. ಮನೆಯಿಂದ ಹೊರಗೆ ಬರುತ್ತಿದ್ದಂತೆ ಯಾದೇವಿ ಮೇಲೆ ನಾಯಿ ದಾಳಿ ಮಾಡಿದೆ.

ಯಾದೇವಿಯ ಬಟ್ಟೆ ಹಿಡಿದು ಎಳೆಯುವ ನಾಯಿ, ಆಕೆ ಕೆಳಗೆ ಬೀಳುತ್ತಿದ್ದಂತೆ ದಾಳಿ ಮಾಡಿದೆ. ನಾಯಿಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ಆಕೆ ಹಿಂದಕ್ಕೆ ಸರಿಯುತ್ತಾಳೆ. ಆದರೆ ನಾಯಿ ದಾಳಿ ಮುಂದುವರೆಸುತ್ತದೆ. ಯಾದೇವಿ ಕೂಗಿಕೊಳ್ಳುತ್ತಿದ್ದಂತೆ ಮನೆಯವರು, ರಸ್ತೆಯಲ್ಲಿ ಹೋಗುತ್ತಿದ್ದವರು ನಾಯಿಯನ್ನು ಬೆದರಿಸಿ ಓಡಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ.

ಆಸ್ಪತ್ರೆಯಲ್ಲಿ ಮಗುವಿನ ಚಿಕಿತ್ಸೆ

ಗಾಯಗೊಂಡಿದ್ದ ಯಾದೇವಿಯನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಆಪಾಯದಿಂದ ಪಾರಾಗಿದ್ದಾಳೆ. ಯಾದೇವಿ ಶಿವಮೊಗ್ಗದಲ್ಲಿರುವ ತನ್ನ ಅತ್ತೆ ಮನೆಗೆ ಬಂದಿದ್ದಳು. ಈ ಸಂದರ್ಭ ಘಟನೆ ಸಂಭವಿಸಿದೆ. ಪಕ್ಕದ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ನಾಯಿ ದಾಳಿ ಮಾಡಿದ ಘಟನೆ ಸೆರೆಯಾಗಿದೆ.

ಪಾಲಿಕೆ ವಿರುದ್ಧ ಆಕ್ರೋಶ

ಶಿವಮೊಗ್ಗ ನಗರದಾದ್ಯಂತ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ. ಇವುಗಳ ನಡುವೆ ಹಂದಿಗಳ ಕಾಟವು ಇದೆ. ಹಂದಿಗಳು ಮತ್ತು ಬೀದಿ ನಾಯಿಗಳನ್ನು ಸೆರೆ ಹಿಡಿಯುವಂತೆ ಜನರು ಹಲವು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment