ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 3 MARCH 2021
ಶಿವಮೊಗ್ಗ ಸಿಟಿಯ ಮೇಲೆ ಇವತ್ತು ಬಹು ಹೊತ್ತು ಹೆಲಿಕಾಪ್ಟರ್ ಹಾರಾಡಿ, ಜನರಲ್ಲಿ ಕುತೂಹಲ ಮೂಡಿಸಿತು. ಹೆಲಿಕಾಪ್ಟರ್ ಹಾರಾಟ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗೆ ಕಾರಣವಾಗಿತ್ತು.
ಇಬ್ಬನಿಯಿಂದ ಲ್ಯಾಂಡಿಂಗ್ ಸಮಸ್ಯೆ
ಬೆಂಗಳೂರಿನಿಂದ ಕುಮಟಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಇಬ್ಬನಿ ಕವಿದಿದ್ದರಿಂದ ಲ್ಯಾಂಡಿಂಗ್ಗೆ ಸಮಸ್ಯೆ ಉಂಟಾಯಿತು. ಹಾಗಾಗಿ ಕೆಲಕಾಲ ಶಿವಮೊಗ್ಗದ ಸುತ್ತಲು ಹಾರಾಟ ನಡೆಸಿತು.
ಲ್ಯಾಂಡಿಂಗ್ ಆಗಬೇಕಿದ್ದಿದ್ದು ಏಕೆ?
ಉಪ ಮುಖ್ಯಮಂತ್ರಿ ಡಾ.ಅಶ್ವಥನಾರಾಯಣ್, ಸಚಿವರಾದ ನಾರಾಯಣಗೌಡ ಮತ್ತು ಗೋಪಾಲಯ್ಯ ಅವರು ಕುಮಟದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಇಂಧನ ಭರ್ತಿ ಮಾಡಿಕೊಳ್ಳುವ ಸಲುವಾಗಿ ಶಿವಮೊಗ್ಗದಲ್ಲಿ ಲ್ಯಾಂಡಿಂಗ್ ಮಾಡಬೇಕಿತ್ತು. ಇಬ್ಬನಿಯಿಂದಾಗಿ ಹೆಲಿಕಾಪ್ಟರ್ ಲ್ಯಾಂಡ್ ಆಗಲು ವಿಳಂಬವಾಯಿತು.
ಕೆಲವ ಹೊತ್ತಿನ ಬಳಿಕ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಯಿತು. ಇಂಧನ ಭರ್ತಿ ಮಾಡಿಕೊಂಡು ಕುಮಟದ ಕಡೆಗೆ ಸಚಿವರು ಪ್ರಯಾಣ ಮುಂದುವರೆಸಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422