ಓಟ ನಿಲ್ಲಿಸಿದ ಈಸೂರು ದಂಗೆ, ಅಂತಿಮ ದರ್ಶನಕ್ಕೆ ಜನಸಾಗರ, ಈ ಹೋರಿ ಬಗ್ಗೆ ಗೊತ್ತಿರಬೇಕಾದ ಐದು ವಿಚಾರಗಳಿವು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIKRIPURA NEWS | 6 MARCH 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಸೋಲಿಲ್ಲದ ಸರದಾರ ಎಂಬ ಖ್ಯಾತಿ ಹೊಂದಿದ್ದ  ಈಸೂರು ದಂಗೆ ಹೋರಿ ಮೃತಪಟ್ಟಿದೆ. ವಯೋಸಹಜ ಕಾರಣದಿಂದ ಹೋರಿ ಕೊನೆಯುಸಿರೆಳೆದಿದೆ. ಈಸೂರು ಗ್ರಾಮದಲ್ಲಿ ಈಸೂರು ದಂಗೆಯ ಅಂತಿಮ ಯಾತ್ರೆ ನಡೆಯಿತು.

ತ್ರಿವರ್ಣ ಹೊದಿಸಿ, ರಾಷ್ಟ್ರಗೀತೆ ಹಾಡಿ ನಮನ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಈಸೂರು ದಂಗೆ ಅಂತಿಮ ದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿದ್ದರು. ಟ್ರಾಕ್ಟರ್ ಮೇಲೆ ಹೋರಿಯನ್ನು ಇರಿಸಿ ಮೆರವಣಿಗೆ ನಡೆಸಲಾಯಿತು. ಗ್ರಾಮದಲ್ಲಿ ದೊಡ್ಡ ಸಂಖ್ಯೆಯ ಜನರು ಸೇರಿ, ಹೋರಿಗೆ ಅಂತಿಮ ನಮನ ಸಲ್ಲಿಸಿದರು. ಅಶೋಕ ಚಕ್ರವಿಲ್ಲದ ತ್ರಿವರ್ಣ ಹೊದಿಸಿ, ರಾಷ್ಟ್ರಗೀತೆ ಹಾಡಿ ಗ್ರಾಮದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಗೊತ್ತಿರಬೇಕಾದ ಐದು ವಿಚಾರಗಳಿವು

ಈಸೂರಿನ ಡಾ.ಪ್ರಶಾಂತ್ ಎಂಬುವರು ಈಸೂರು ದಂಗೆ ಹೋರಿಯನ್ನು ಸಾಕಿದ್ದರು. ಈ ಹೋರಿ ಶಿವಮೊಗ್ಗ, ಹಾವೇರಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಲ್ಲಿ ಭಾರೀ ಹೆಸರು ಗಳಿಸಿತ್ತು. ಪಕ್ಕದ ತಮಿಳುನಾಡಿನಲ್ಲೂ ಈಸೂರು ದಂಗೆಗೆ ಅಭಿಮಾನಿಗಳಿದ್ದಾರೆ.

ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಹಿಸಿತ್ತಿತ್ತು. ಈಸೂರು ದಂಗೆ ಹೋರಿಯನ್ನು ನೋಡಲೆಂದೇ ಹೋರಿ‌ಹಬ್ಬಕ್ಕೆ ಅಭಿಮಾನಿಗಳು ಹರಿದುಬರುತ್ತಿದ್ದರು.

156689232 1340692152958868 250935611866967950 n.jpg? nc cat=107&ccb=1 3& nc sid=8bfeb9& nc ohc=91xaWUh eCAAX9bsN39& nc ht=scontent.fixe1 2

ಯಾವುದೇ ಹೋರಿ ಬೆದರಿಸುವ ಸ್ಪರ್ಧೆಗೆ ಹೋದರೂ ಈಸೂರು ದಂಗೆ ಹೋರಿಗೆ ಬಹುಮಾನ ಕಿಟ್ಟಿಟ್ಟ ಬುತ್ತಿ. ಎಷ್ಟೇ ಜನರು ಅಡ್ಡಗಟ್ಟಿದರೂ, ಯಾರ ಕೈಗೂ ಸಿಗದೆ ತಪ್ಪಿಸಿಕೊಳ್ಳುತ್ತಿತ್ತು.

ನೂರಾರು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಹಿಸಿದ್ದರೂ, ಈತನಕ ಯಾರೊಬ್ಬರು ಈಸೂರು ದಂಗೆ ಹೋರಿಯನ್ನು ಹಿಡಿದು, ಕೊಬ್ಬರಿ ಹರಿಯಲು ಸಾದ್ಯವಾಗಿಲ್ಲ. ಈ ಹೋರಿಯು ಮಿಂಚಿನ ವೇಗದಲ್ಲಿ ಓಡುವ ಶಕ್ತಿ ಹೊಂದಿತ್ತು.

7 ಬೈಕ್, 15 ಫ್ರಿಡ್ಜ್ , 15 ಟಿವಿ, ಎತ್ತಿನಗಾಡಿ, ಬಂಗಾರದ ಬಳೆ, 10ಕ್ಕೂ ಹೆಚ್ಚು ಬಂಗಾರದ ಬಹುಮಾನಗಳು ಸೇರಿದಂತೆ ನೂರಾರು ಬಹುಮಾನಗಳನ್ನು ಈ ಹೋರಿ ಗಳಿಸಿದೆ.

ರಾಜ್ಯಾದ್ಯಂತ ಇದ್ದಾರೆ ಅಭಿಮಾನಿಗಳು

ಈಸೂರು ದಂಗೆ ಹೋರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಹೋರಿ ಬೆದರಿಸುವ ಸ್ಪರ್ಧೆಯ ಬಗ್ಗೆ ಆಸಕ್ತಿ ಹೊಂದಿರುವವರಿಗೆಲ್ಲ ಈ ಹೋರಿ ಪರಿಚಿತ. ಈ ಹೋರಿಗಾಗಿಯೇ ಸ್ಪರ್ಧೆಗೆ ಬರುವವರಿದ್ದರು. ಪ್ರತಿ ಸ್ಪರ್ಧೆಯಲ್ಲೂ ಈಸೂರು ದಂಗೆಯನ್ನು ಹಿಡಿದು ನಿಲ್ಲಿಸಬೇಕು ಎಂದು ಅಖಾಡಕ್ಕೆ ಇಳಿಯುವವರಿದ್ದರು.

ಟ್ಯಾಟೋ, ಫೋಟೊ ಹಾಕಿಸಿಕೊಳ್ಳುತ್ತಿದ್ದರು

ಈಸೂರು ದಂಗೆ ಹೋರಿ ಅದೆಷ್ಟು ಫೇಮಸ್ ಅಂದರೆ, ಇದರೊಟ್ಟಿಗೆ ಫೋಟೊ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿ ಬೀಳುತ್ತಿದ್ದರು. ಹೋರಿ ಬೆದರಿಸುವ ಸ್ಪರ್ಧೆಗೆ ಮೊದಲು ಮತ್ತು ಆನಂತರ ಈಸೂರು ದಂಗೆ ಜೊತೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳಲು ನೂಕಾಟ, ತಳ್ಳಾಟವಾಗುತ್ತಿತ್ತು. ಇನ್ನು, ನೂರಾರು ಮಂದಿ ಈಸೂರು ದಂಗೆ ಹೋರಿಯ ಹಚ್ಚೆ ಅಥವಾ ಟ್ಯಾಟೋಗಳನ್ನು ಹಾಕಿಸಿಕೊಂಡು, ಅಭಿಮಾನ ಪ್ರದರ್ಶಿಸುತ್ತಿದ್ದರು.

ಇಷ್ಟೊಂದು ಖ್ಯಾತಿಯ ಪಡೆದಿದ್ದ ಈಸೂರು ದಂಗೆ ಹೋರಿ, ಓಟ ನಿಲ್ಲಿಸಿದೆ. ಅದನ್ನು ಸಾಕಿದವರು, ಗ್ರಾಮಸ್ಥರು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಮಂದಿ ಪೋಸ್ಟ್ ಪ್ರಕಟಿಸಿ, ಈಸೂರು ದಂಗೆಗೆ ನಮನ ಸಲ್ಲಿಸಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment