ಜನಾಕ್ರೋಶ ಸಮಾವೇಶ, ಬಸ್ ಸ್ಟಾಂಡ್‌ನಿಂದ ಮೆರವಣಿಗೆ, ಹೇಗಿತ್ತು ಪ್ರತಿಭಟನಾ ರಾಲಿ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 MARCH 2021

ಕಾಂಗ್ರೆಸ್ ಪಕ್ಷದ  ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಜನಾಕ್ರೋಶ ಪ್ರತಿಭಟನೆ ಹಿನ್ನೆಲೆ, ಬೃಹತ್ ಮೆರವಣಿಗೆ ನಡೆಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಮೆರವಣಿಗೆಯಲ್ಲ ಭಾಗವಹಿಸಿದ್ದರು.

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆ ಸೈನ್ಸ್‍ ಮೈದಾನದವರೆಗೆ ನಡೆಯಿತು.

ಲಾರಿ ಏರಿದ ಮುಖಂಡರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಮಾಜಿ ಸಚಿವರು, ಶಾಸಕರು, ಮುಖಂಡರು ಲಾರಿ ಏರಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ದಾರಿ ಉದ್ದಕ್ಕೂ ಜನರತ್ತ ಕೈ ಬೀಸುತ್ತ, ಕೈ ಮುಗಿಯುತ್ತ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದರು.

ಶಿವಪ್ಪನಾಯಕನಿಗೆ ಹೂ ಮಳೆ

ಶಿವಪ್ಪನಾಯಕ ಪ್ರತಿಮೆಗೆ ಹೂ ಮಳೆ ಸುರಿಸಲಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಲಾರಿಯಲ್ಲಿದ್ದ ಎಲ್ಲಾ ಮುಖಂಡರು, ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಕಾರ್ಯಕರ್ತರು ಘೋಷಣೆ ಕೂಗಿದರು.

ನಡೆದು ಬಂದ ಸಂಗಮೇಶ್ವರ್

ಇನ್ನು, ಮೆರವಣಿಗೆಯ ಹಾದಿಯುದ್ದಕ್ಕೂ ಭದ್ರಾವತಿ ಶಾಸಕ ಸಂಗಮೇಶ್ವರ್ ಅವರು ನಡೆದು ಬಂದರು. ಕಾರ್ಯಕರ್ತರ ಜೊತೆಗೆ ನಡೆದು ಬಂದ ಸಂಗಮೇಶ್ವರ್ ಅವರು, ಅಲ್ಲಲ್ಲಿ ಜನರೊಂದಿಗೆ ಮಾತನಾಡಿದರು, ತಮಗಾದ ನೋವು ಹಂಚಿಕೊಂಡರು.

ತಮಟೆ, ಡಾನ್ಸು, ಘೋಷಣೆ

ಮೆರವಣಿಗೆ ಹಾದಿಯುದ್ದಕ್ಕೂ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಸಂಗಮೇಶ್ವರ್ ಅವರ ಪರವಾಗಿ ಘೋಷಣೆ ಕೂಗಿದರು. ಕೆಲವು ಕಡೆ ತಮಟೆ ಸದ್ದಿಗೆ ಭರ್ಜರಿ ಡಾನ್ಸ್  ಮಾಡಿದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

140321 Janakrosha Rally Shimoga DK Shivakumar Siddaramaiah 1

Leave a Comment