ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 19 MARCH 2021
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಸರಗಳ್ಳರ ಭೀತಿ ಒಂದೆಡೆಯಾದರೆ, ಶಿವಮೊಗ್ಗದಲ್ಲಿ ಈಗ ಬ್ರೌನ್ ಪೌಡರ್ ಗ್ಯಾಂಗ್ ಪ್ರತ್ಯಕ್ಷವಾಗಿದೆ. ಸ್ವಲ್ಪ ಯಾಮಾರಿದರೂ ಮಹಿಳೆಯರು ತಮ್ಮ ಕಣ್ಮುಂದೆಯೇ ಚಿನ್ನಾಭರಣ ಕಳೆದುಕೊಳ್ಳುವ ಆತಂಕವಿದೆ.
ಶಿವಮೊಗ್ಗದ ಮಹಿಳೆಗೆ ವಂಚನೆ
ಫಳಫಳ ಹೊಳೆಯುವಂತೆ ಮಾಡಿ ಕೊಡ್ತೀವಿ ಅಂತಾ ನಂಬಿಸಿ, ಮಹಿಳೆಯೊಬ್ಬರ ಮಾಂಗಲ್ಯ ಸರವನ್ನೇ ಕಟ್ ಮಾಡಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಘಟನೆ ಸಂಭವಿಸಿದೆ.
ಅಶೋಕ ನಗರದ ಸಂಗೀತಾ ಎಂಬುವವರನ್ನು ಕಳ್ಳರು ವಂಚಿಸಿದ್ದಾರೆ. ಚಿನ್ನ, ಬೆಳ್ಳಿಯ ಆಭರಣಗಳನ್ನು ಉಚಿತವಾಗಿ ಹೊಳೆಯುವಂತೆ ಮಾಡಿ ಕೊಡುವುದಾಗಿ ನಂಬಿಸಿ ಈ ಕೃತ್ಯ ಎಸಗಿದ್ದಾರೆ.
ಏನಿದು ವಂಚನೆ? ಹೇಗಾಯ್ತು ಘಟನೆ?
ಬೆಳ್ಳಿ, ಬಂಗಾರದ ಆಭರಣಗಳು, ಶೋಕೇಸ್, ಟಿವಿ ಸೇರಿದಂತೆ ಹಲವು ವಸ್ತುಗಳನ್ನು ಕ್ಲೀನ್ ಮಾಡುವ ಪೌಡರ್ ಮಾರಾಟ ಮಾಡುತ್ತಿದ್ದೇವೆ ಎಂದು ನಂಬಿಸಿ, ಇಬ್ಬರು ಯುಕವರು ಸಂಗೀತಾ ಅವರ ಮನೆ ಬಳಿಗೆ ಬಂದಿದ್ದಾರೆ. ಸ್ಯಾಂಪಲ್ ತೋರಿಸುವುದಾಗಿ ತಿಳಿಸಿದ್ದಾರೆ.
ಯುವಕರ ಮಾತು ನಂಬಿದ ಸಂಗೀತಾ ಅವರು ತಮ್ಮ ಬೆಳ್ಳಿ ವಸ್ತುಗಳನ್ನು ನೀಡಿದ್ದಾರೆ. ಪೌಡರ್ ಬಳಸಿ ಬೆಳ್ಳಿ ವಸ್ತುಗಳು ಫಳಫಳ ಹೊಳೆಯುವಂತೆ ಮಾಡಿಕೊಟ್ಟಿದ್ದಾರೆ. ಆ ಬಳಿಕ ಚಿನ್ನದ ಆಭರಣಗಳಿದ್ದರೆ ಅವುಗಳನ್ನು ಇದೆ ರೀತಿ ಹೊಳೆಯುವಂತೆ ಮಾಡಿಕೊಡುತ್ತೇವೆ ಎಂದು ವಂಚಕರು ತಿಳಿಸಿದ್ದಾರೆ.
ಸಂಗೀತಾ ಅವರು ತಮ್ಮ ಮಾಂಗಲ್ಯ ಸರವನ್ನೇ ವಂಚಕರ ಕೈಗಿಟ್ಟಿದ್ದಾರೆ. ಮಾಂಗಲ್ಯ ಸರದ ಮೇಲೆ ಬ್ರೌನ್ ಪೌಡರ್ ಸುರಿದು, ಲಿಕ್ವಿಡ್ ಮತ್ತು ಜೆಲ್ ಹಾಕಿ ಬ್ರೆಷ್ ಬಳಸಿ ವಂಚಕರು ತೊಳೆಯುವಂತೆ ನಟಿಸಿದ್ದಾರೆ. ಕೆಲವು ಕ್ಷಣದ ಬಳಿಕ ಬಟ್ಟೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಚಿನ್ನದ ಸರವನ್ನು ಸುಟ್ಟಿದ್ದಾರೆ. ನಂತರ ಮಾಂಗಲ್ಯ ಸರವನ್ನು ನೀರಿನಿಂದ ತೊಳೆದು, ಅರಿಶಿನ ಪುಡಿ ಹಾಕಿ, ಪೇಪರ್ ಒಂದರಲ್ಲಿ ಪೊಟ್ಟಣ ಕಟ್ಟಿ ಕೊಟ್ಟಿದ್ದಾರೆ.
ಹತ್ತು ನಿಮಿಷದ ಬಳಿಕ ತೆಗೆಯಿರಿ
ಪೊಟ್ಟಣವನ್ನು ಹತ್ತು ನಿಮಿಷದ ಬಳಿಕ ತೆಗೆಯಿರಿ ಎಂದು ಸಂಗೀತಾ ಅವರಿಗೆ ತಿಳಿಸಿದ ವಂಚಕರು, ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಟ್ಟಣದಿಂದ ಮಾಂಗ್ಯಲ ಸರವನ್ನು ತೆಗೆದು, ತೊಳೆಯಲು ಹೋದಾಗ ಅಲ್ಲಲ್ಲಿ ತುಂಡಾಗಿರುವುದು ಸಂಗೀತಾ ಅವರ ಗಮನಕ್ಕೆ ಬಂದಿದೆ. ವಂಚನೆಗೊಳಗಾಗಿರುವುದು ಅರಿವಾಗುತ್ತಿದ್ದಂತೆ ಕಳ್ಳರಿಗಾಗಿ ಎಲ್ಲೆಡೆ ಹುಡುಕಿದ್ದಾರೆ.
ಮಾಂಗಲ್ಯ ಅರ್ಧಕರ್ಧ ಕಟ್
ಸಂಗೀತಾ ಅವರ ಮಾಂಗ್ಯದ ಸರವು 46 ಗ್ರಾಂ ಇತ್ತು. ವಂಚಕರು ಸುಮಾರು 23 ಗ್ರಾಂ ಕಟ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಇದರ ಮೌಲ್ಯ ಸುಮಾರು 93 ಸಾವಿರ ಎಂದು ಅಂದಾಜಿಸಲಾಗಿದೆ.
ಇಬ್ಬರು ಯುವಕರ ಅಂದಾಜು ವಯಸ್ಸು 25 ಮತ್ತು 27 ಇರಬಹುದು ಎಂದು ಸಂಗೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






