ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 20 MARCH 2021
ವಾಹನಕ್ಕೆ ಕಸ ನೀಡದೆ, ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದವರಿಗೆ ನಗರಸಭೆ ಸಿಬ್ಬಂದಿಗಳು ಬಿಸಿ ಮುಟ್ಟಿಸಿದ್ದಾರೆ. ರಾತ್ರಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಇನ್ಮುಂದೆ ರಸ್ತೆ ಬದಿಯಲ್ಲಿ ಕಸ ಬಿಸಾಡಿದರೆ ದಂಡ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಾಗರ ನಗರಸಭೆಯ ಪರಿಸರ ಅಭಿಯಂತರರಾದ ಮದನ್ ಅವರ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿಗಳು ನೈಟ್ ರೌಂಡ್ಸ್ ಮಾಡಿದರು. ರಾತ್ರಿ ವೇಳೆ ಎಲ್ಲೆಂದರಲ್ಲಿ ಕಸ ಎಸೆಯುವರನ್ನು ಪತ್ತೆ ಹಚ್ಚಿ, ಬುದ್ದಿ ಮಾತು ಹೇಳಿದರು.
ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‍ಗಳಿವೆ. ಇಲ್ಲಿ ಹಲವರು ನಗರಸಭೆಯ ವಾಹನಕ್ಕೆ ಕಸ ಹಾಕುವ ಬದಲು, ರಸ್ತೆ ಬದಿಯಲ್ಲಿ, ಖಾಲಿ ಸೈಟುಗಳಲ್ಲಿ ಎಸೆಯುತ್ತಿದ್ದಾರೆ. ಕಸ ಕೊಳೆತು ದುರ್ನಾಥ ಬೀರುತ್ತಿದೆ. ಅಲ್ಲದೆ ರೋಗಗಳನ್ನು ಹರಡುತ್ತಿದೆ. ಪಟ್ಟಣದ ಸೌಂದರ್ಯವನ್ನೂ ಹಾಳುಗೆಡವುತ್ತಿದೆ. ಇದೆ ಕಾರಣಕ್ಕೆ ಅಧಿಕಾರಿಗಳು ನೈಟ್ ರೌಂಡ್ಸ್ ಮಾಡಿ, ಜನರಲ್ಲಿ ತಿಳಿವಳಿಕೆ ಮೂಡಿಸಿದರು. ಇದು ಮುಂದುವರೆದರೆ ದಂಡ ಹಾಕುವ ಎಚ್ಚರಿಕೆ ನೀಡಿದ್ದರು.
ಸಾಗರ ನಗರಸಭೆ ಅಧಿಕಾರಿಗಳು ಈ ಹಿಂದೆಯೂ ನೈಟ್ ರೌಂಡ್ಸ್ ಮಾಡಿ, ಕಸ ಎಸೆಯುವವರಿಗೆ ಬಿಸಿ ಮುಟ್ಟಿಸಿದ್ದರು. ಆ ಬಳಿಕ ಒಂದಷ್ಟು ಬದಲಾವಣೆ ಗೋಚರಿಸಿತ್ತು.
ಸಿಬ್ಬಂದಿಗಳಾದ ರಾಜು, ರಾಜೇಶ್ ಸೇರಿದಂತೆ ಹಲವರು ನೈಟ್ ರೌಂಡ್ಸ್‍ನಲ್ಲಿ ಇದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]