ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 MARCH 2021
ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಸೇರಿದಂತೆ ನಕಲಿ ದಾಖಲೆಗಳನ್ನು ಮಾಡಿಕೊಡುತ್ತಿದ್ದ ಕಂಪ್ಯೂಟರ್ ಸೆಂಟರ್ ಮಾಲೀಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನು ನೇಪಾಳ ಮೂಲದ ಗಾಂಧಿ ನಗರ ನಿವಾಸಿ ವಿಷ್ಣು ಭಕ್ತ ಎಂದು ತಿಳಿದು ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗಾಂಧಿ ನಗರದ ಕಂಪ್ಯೂಟರ್ ಅಂಗಡಿಯೊಂದರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಆರೋಪವಿದೆ. ಅಸಲಿ ದಾಖಲೆಗೆ ಹೋಲುವಂತಹ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಮಾಡುತ್ತಿದ್ದ. ಐದಾರು ವರ್ಷದಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ.
ವಂಚಕರು ಸಿಕ್ಕಿಬಿದ್ದಿದ್ದು ಹೇಗೆ?
ಕಂಪ್ಯೂಟರ್ ಅಂಗಡಿಯಲ್ಲಿ ನಡೆಯುತ್ತಿರುವ ಕಳ್ಳ ದಂಧೆ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕಂಪ್ಯೂಟರ್ ಸೆಂಟರ್ ಮಾಲೀಕ ವಿಷ್ಣು ಭಕ್ತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
20 ರೂ ಇ – ಸ್ಟಾಂಪ್ ಕೊಂಡೊಯ್ದ ಪೊಲೀಸರು, ವಿಷ್ಣು ಭಕ್ತನಿಗೆ ಕೊಟ್ಟು, ಇದೆ ಮಾದರಿಯ ನಕಲಿ ಇ – ಸ್ಟಾಂಪನ್ನು ಹಳೆಯ ದಿನಾಂಕ್ಕೆ ಮಾಡಿಕೊಡಬೇಕು. ಅದರ ಮುಖಬೆಲೆಯನ್ನು 100 ರೂ.ಗೆ ಬದಲಾಯಿಸಬೇಕು ಎಂದು ಮನವಿ ಮಾಡಿದರು. ಕೆಲವೇ ನಿಮಿಷದಲ್ಲಿ ಅಸಲಿಯನ್ನೇ ಹೋಲುವಂತಹ ನಕಲಿ ಇ – ಸ್ಟಾಂಪ್ ಪೇಪರ್ ಹಳೆ ದಿನಾಂಕಕ್ಕೆ ಮಾಡಿಕೊಟ್ಟಿದ್ದ. ಇದರ ಆಧಾರದ ಮೇಲೆ ವಿಷ್ಣು ಭಕ್ತನನ್ನು ಬಂಧಿಸಲಾಗಿದೆ.
ವಿನೋಬನಗರ ಠಾಣೆ ಇನ್ಸ್ ಪೆಕ್ಟರ್ ರವಿ ಅವರ ಮಾರ್ಗದರ್ಶನದಲ್ಲಿ ಜಯನಗರ ಠಾಣೆಯ ಪ್ರಕಾಶ್ ಮತ್ತು ವಿನೋಬನಗರದ ಶಿವಪ್ಪ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]