ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ತೀರ್ಥಹಳ್ಳಿ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಹೆಗ್ಗಾರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್ (PSI Sachin) ಅಂತ್ಯಕ್ರಿಯೆ ಸೋಮವಾರ ತಾಲೂಕಿನ ಕುಡವಳ್ಳಿಯ ಬಿಸಿಲುಮನೆ ಗ್ರಾಮದಲ್ಲಿ ನಡೆಯಿತು.

ಇದನ್ನೂ ಓದಿ – ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

PSI-SACHIN-LAST-RITES-AT-KUDUVALLI-IN-THIRTHAHALLI.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ನೇತೃತ್ವದಲ್ಲಿ ಪೊಲೀಸ್‌ ಗೌರವ ವಂದನೆ ನಡೆಯಿತು. ಈ ಸಂದರ್ಭ ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಇದ್ದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ನಂತರ ಅಂತ್ಯಕ್ರಿಯೆ ನೆರವೇರಿತು.

PSI-SACHIN-LAST-RITES-AT-KUDUVALLI-IN-THIRTHAHALLI.

ಇನ್ನೆರಡು ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು

ಕೆಲವು ತಿಂಗಳ ಹಿಂದೆ ಸಚಿನ್ ಅವರ ತಂದೆ ನಿಧನರಾಗಿದ್ದರು. ಬಡತನದಲ್ಲಿಯೇ ಬೆಳೆದು ಬಂದಿದ್ದ ಸಚಿನ್‌ ಕಾನ್‌ಸ್ಟೇಬಲ್‌ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಪರೀಕ್ಷೆ ಬರೆದು ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೇರಿದ್ದರು. ಮೇ 10ರಂದು ಸಚಿನ್‌ ಅವರ ಮದುವೆ ನಿಶ್ಚಯವಾಗಿತ್ತು. ಸಚಿನ್ ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

PSI-SACHIN-LAST-RITES-AT-KUDUVALLI-IN-THIRTHAHALLI.
PSI-SACHIN-LAST-RITES-AT-KUDUVALLI-IN-THIRTHAHALLI.
Sunrise Facility Services, Sri sai Trust Shimoga

Leave a Comment