ಶಿವಮೊಗ್ಗ ಜೆಡಿಎಸ್ ಮಾಜಿ ಅಧ್ಯಕ್ಷರಿಗೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 APRIL 2021

ಜೆಡಿಎಸ್ ಪಕ್ಷದ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಇವತ್ತು ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದರು. ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸುಂದರೇಶ್ ಅವರಿಂದ ಮಂಜುನಾಥಗೌಡ ಮತ್ತು ಬೆಂಬಲಿಗರು ಸದಸ್ಯತ್ವ ಪಡೆದು, ಪಕ್ಷಕ್ಕೆ ಸೇರ್ಪಡೆಯಾದರು.

ಯಾರೆಲ್ಲ ಕಾಂಗ್ರೆಸ್ ಸೇರಿದರು?

ಆರ್‍.ಎಂ.ಮಂಜುನಾಥಗೌಡ ಅವರೊಂದಿಗೆ ಶಿವಮೊಗ್ಗ ಎಪಿಎಂಸಿ ಅಧ್ಯಕ್ಷ ದುಗ್ಗಪ್ಪಗೌಡ, ಟಿ.ಎಲ್.ಸುಂದರೇಶ್, ಪಿ.ಕರಿಯಪ್ಪ, ಬಿ.ಆರ್.ರಾಘವೇಂದ್ರ ಶೆಟ್ಟಿ, ಸೈಯದ್ ಯಾಸೀನ್, ಕೆ.ಎಲ್.ಜಗದೀಶ್ವರ್, ರತ್ನಾಕರ ಶೆಟ್ಟಿ, ಟಿ.ಎನ್.ಹರೀಶ್, ಎಂ.ರಮೇಶ್ ಶಂಕರಘಟ್ಟ, ರಾಘವೇಂದ್ರ ವಿ.ಶೆಟ್ಟಿ, ಹೆಚ್.ಆರ್.ಅಶ್ವಥ ಗೌಡ, ಕೆ.ಆರ್‍.ನಾಗರಾಜ, ರಾಮ ಸೇರಿದಂತೆ ಹಲವರು ಪಕ್ಷ ಸೇರ್ಪಡೆಯಾದರು.

ಸದಸ್ಯತ್ವ ಚೀಟಿ, ಶಾಲು, ಸಿಹಿ

ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಮಂಜುನಾಥಗೌಡ ಮತ್ತು ಬೆಂಬಲಿಗರಿಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು, ಸದಸ್ಯತ್ವ ಚೀಟಿ ನೀಡಿದರು. ಎಲ್ಲರಿಗೂ ಕಾಂಗ್ರೆಸ್ ಶಾಲು ಹೊದಿಸಿ, ಸಿಹಿ ತಿನ್ನಿಸಿ ಪಕ್ಷಕ್ಕೆ ಸ್ವಾಗತಿಸಿದರು.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment