ಶಿವಪ್ಪನಾಯಕ ಅರಮನೆಯಲ್ಲಿ ಜಲಿಯನ್ ವಾಲಾ ಬಾಗ್ ನೆನಪು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

169156601 1095982247548351 4823304453913451213 n.jpg? nc cat=109&ccb=1 3& nc sid=8bfeb9& nc ohc=lzqbq8nu4bMAX8m5ozk& nc ht=scontent.fblr20 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ನಿವೃತ್ತಿ ಬಳಿಕವು ಯೋಧರಿಗೆ ಸೇವೆಯಲ್ಲಿರುವಾಗ ಲಭಿಸುವ ಗೌರವ ದೊರೆಯಬೇಕು ಎಂದು ಶಿವಮೊಗ್ಗ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಅಂಗವಾಗಿ ಶಿವಪ್ಪನಾಯಕ ಅರಮನೆ ಆವರಣದಲ್ಲಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಹುತಾತ್ಮರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೇಣದ ಬತ್ತಿ ಹಚ್ಚಿಕೊಂಡು ಹಲವರು ಯೋಧರಿಗೆ ಗೌರವ ಸಲ್ಲಿಸುತ್ತಾರೆ. ಆದರೆ ನಿವೃತ್ತಿ ಬಳಿಕ ಸಾಮಾಜಿಕ ಬದುಕಿಗೆ ಮರಳಿದಾಗ ಯಾರೂ ನೆರವು ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

172465345 1366260520402031 3185856549242442366 n.jpg? nc cat=100&ccb=1 3& nc sid=8bfeb9& nc ohc=sFL1HepmuWoAX8Aj9GG& nc ht=scontent.fblr20 1

ಇತಿಹಾಸವನ್ನು ನೋಡಿ ಕಲಿಬೇಕು. ಭವಿಷ್ಯವನ್ನು ರೂಪಿಸಿಕೊಳ್ಳಲು ಇತಿಹಾಸ ಪ್ರಮುಖವಾಗುತ್ತದೆ.  ಯುವಕರಿಗೆ ಇತಿಹಾಸ ತಿಳಿಸಬೇಕಿದೆ. ಯುವ ಸಮೂಹವನ್ನು ಗಮನಿಸಿದರೆ ಭವಿಷ್ಯದ ಕುರಿತು ಆತಂಕ ಉಂಟಾಗುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಹೆಚ್ಚು ಜನರಿಗೆ ಇತಿಹಾಸ ತಿಳಿಸಬಹುದಾಗಿದೆ ಎಂದು ಟಿ.ವಿ.ಪ್ರಕಾಶ್ ತಿಳಿಸಿದರು.

ಹತ್ಯಾಕಾಂಡದ ರೌದ್ರತೆ ಕುರಿತು ವಿಶೇಷ ಉಪನ್ಯಾಸ

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ಹುತಾತ್ಮರ ಕುರಿತು ಡಿವಿಎಸ್‍ ಕಾಲೇಜು ಉಪನ್ಯಾಸಕ ಕೆ.ಜಿ.ವೆಂಕಟೇಶ್ ವಿಶೇಷ ಉಪನ್ಯಾಸ ನೀಡಿದರು. ಸ್ವಾತಂತ್ರ್ಯ ಇಲ್ಲದೆ ಇದ್ದರೆ ಮನುಷ್ಯ ಮನುಷ್ಯನಾಗಿ ಉಳಿಯುವುದಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಇರಲಿಲ್ಲ. ಆಗ ನಮ್ಮ ಹಿರಿಯರು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಂಡು ಹೋರಾಡಿದರು. ಪಂಜಾಬಿನಲ್ಲಿ ಯುಗಾದಿ ರೀತಿಯ ಸುಗ್ಗಿ ಸಂಭ್ರಮದ ದಿನ, ಜಲಿಯನ್ ವಾಲಾ ಬಾಗ್‍ ಪಾರ್ಕ್‍ನಲ್ಲಿ ಪ್ರತಿಭಟನಾ ಸಭೆ ನಡೆಯುತ್ತಿದ್ದಾಗ ಬ್ರಿಟೀಷರು ದಾಳಿ ನಡೆಸಿದ್ದರು ಎಂದರು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಉಪನ್ಯಾಸಕ ಕೆ.ಜಿ.ವೆಂಕಟೇಶ್ ಮಾಹಿತಿ ನೀಡಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್‍.ಶೇಜೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ಉಪಸ್ಥಿತರಿದ್ದರು.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment