BREAKING NEWS | ಯುಗಾದಿ ಹಬ್ಬದಂದು ಭದ್ರಾವತಿಯಲ್ಲಿ ಸಾರಿಗೆ ನೌಕರರಿಂದ ಭಿಕ್ಷಾಟನೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 APRIL 2021

ಆರನೆ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಗಾಗಿ ರಾಜ್ಯಾದ್ಯಂತ ಕೆಎಸ್​ಆರ್​ಟಿಸಿ ನೌಕರರು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಭದ್ರಾವತಿಯಲ್ಲಿ ಕೆಎಸ್​ಆರ್​ಟಿಸಿ ನೌಕರರು ಯುಗಾದಿ ಹಬ್ಬದ ದಿನ ಭಿಕ್ಷಾಟನೆ ಮಾಡಿ ವಿಭಿನ್ನವಾಗಿ ಪ್ರತಿಭಟಿಸುತ್ತಿದ್ದಾರೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ – ಶಿವಮೊಗ್ಗ ಡಿಸಿ ಕಚೇರಿ ಮುಂದೆ ಮಹಿಳೆಯರು, ಮಕ್ಕಳಿಂದ ತಟ್ಟೆ, ಲೋಟ ಬಡಿದು ಪ್ರತಿಭಟನೆ

ಭದ್ರಾವತಿಯ ಪ್ರಮುಖ ಕಡೆ ಕೆಎಸ್​ಆರ್​ಟಿಸಿ ನೌಕರರು ಯುಗಾದಿ ಹಬ್ಬದ ದಿನ ಭಿಕ್ಷಾಟನೆ ನಡೆಸುತ್ತಿದ್ದಾರೆ. ಯುನಿಫಾರಂನಲ್ಲೇ ಸಾರಿಗೆ ನೌಕರರು ಭಿಕ್ಷೆ ಬೇಡುತ್ತಿದ್ದಾರೆ. ಭದ್ರಾವತಿಯ ಬಸವೇಶ್ವರ ಸರ್ಕಲ್​ನಲ್ಲಿ ಹತ್ತಕ್ಕೂ ಹೆಚ್ಚು ನೌಕರರು ಭಿಕ್ಷೆ ಬೇಡಿ, ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ – ಸಾಗರದಲ್ಲೂ ಸಾರಿಗೆ ನೌಕರರ ಆಕ್ರೋಶ, ತಟ್ಟೆ, ಲೋಟ ಬಡಿಯುತ್ತ ಮೆರವಣಿಗೆ

ಯುಗಾದಿ ಮುನ್ನಾದಿನ ಜಿಲ್ಲಾಧಿಕಾರಿ ಕಚೇರಿ ಮುಂದೆ, ಕೆಎಸ್​ಆರ್​ಟಿಸಿ ನೌಕರರ ಕುಟುಂಬದವರು ತಟ್ಟೆ, ಲೋಟ ಬಡಿಯುವ ಮೂಲಕ ಪ್ರತಿಭಟನೆ ನಡೆಸಿದ್ದರು.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

Leave a Comment