ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ನವದದೆಹಲಿ : ಕರೋನ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಲಾಕ್ಡೌನ್ ಘೋಷಣೆಯಾಗಿದೆ. ಆದರೂ ರೈಲುಗಳ ಸಂಚಾರ ಎಂದಿನಂತೆ ಇರಲಿದೆ. ಅಗತ್ಯವಿದ್ದ ಕಡೆ ಹೆಚ್ಚುವರಿ ರೈಲುಗಳನ್ನು ಓಡಲಾಗತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಮಹಾರಾಷ್ಟ್ರ, ದೆಹಲಿ, ಗುಜರಾತ್, ಕರ್ನಾಟಕದಿಂದ ವಿವಿಧೆಡೆಗೆ ಹೆಚ್ಚು ರೈಲುಗಳು ಸಂಚರಿಸುತ್ತಿವೆ. ಇಲ್ಲಿನ ಪರಿಸ್ಥಿತಿಯ ಅವಲೋಕ ಮಾಡಲಾಗುತ್ತಿದೆ. ಟಿಕೆಟಿಂಗ್ ಪ್ರಮಾಣವನ್ನು ಗಮನಿಸಲಾಗುತ್ತಿದೆ. ಹೆಚ್ಚಿನ ಪ್ರಯಾಣಿಕರು ಸಂಚರಿಸುವ ಮಾರ್ಗದಲ್ಲಿ ಹೆಚ್ಚುವರಿ ರೈಲು ಓಡಿಸಲು ಚಿಂತಿಸಲಾಗಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಎಲ್ಲರಿಗೂ ಆಕ್ಸಿಜನ್, ವೆಂಟಿಲೇಟರ್ ಬೇಕಾಗಲ್ಲ, ಕರೋನ ಬಗ್ಗೆ ಆತಂಕವೂ ಬೇಡ, ತಜ್ಞ ವೈದ್ಯರು ಸಲಹೆ ಏನು?
ದೇಶದಲ್ಲಿ ಶೇ.70ರಷ್ಟು ರೈಲುಗಳು ಕೋವಿಡ್ ಪೂರ್ವದಿಂದಲೂ ಸಂಚರಿಸುತ್ತಿವೆ. 330 ಬೇಸಿಗೆ ರೈಲುಗಳು ಕೂಡ ಓಡಾಡುತ್ತಿವೆ. ಕೋವಿಡ್ ಹಿನ್ನೆಲೆ ಯಾವುದೆ ರಾಜ್ಯವು ರೈಲುಗಳ ಸ್ಥಗಿತಕ್ಕೆ ಮನವಿ ಮಾಡದ ಹಿನ್ನೆಲೆ ಸಂಚಾರ ನಿರಂತರವಾಗಿದೆ ಎಂದು ಸುನೀತ್ ಶರ್ಮಾ ಹೇಳಿದ್ದಾರೆ.