ಅರ್ಧಕ್ಕರ್ಧ ಸಹ್ಯಾದ್ರಿ ಕಾಲೇಜು ಜಾಗದಲ್ಲಿ ಖೇಲೋ ಇಂಡಿಯಾ, ಗೇಟು ಹಾರಿ ಹೋಗಿ ವಿಸಿಗೆ ಮುತ್ತಿಗೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 APRIL 2021

ಸಹ್ಯಾದ್ರಿ ಕಾಲೇಜು ಕ್ಯಾಂಪಸ್‍ನಲ್ಲಿ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಭೆ ನಡೆಸಲು ಶಿವಮೊಗ್ಗಕ್ಕೆ ಆಗಮಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗೆ ಇವತ್ತು NSUI ಕಾರ್ಯಕರ್ತರು ಮುತ್ತಿಗೆ ಹಾಕಿ, ಘೋಷಣೆ ಕೂಗಿದರು.

Covid 19 Vaccination Kan poster 1 1

ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಆದರೆ ಈ ಕೇಂದ್ರ ಸ್ಥಾಪನೆಯಿಂದ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ ಎಂದು NSUI ಕಾರ್ಯಕರ್ತರು ಆರೋಪಿಸಿದರು.

ವಿಶೇಷ ಕ್ರೀಡಾ ತರಬೇತಿ ಕೇಂದ್ರದಿಂದ ಶೈಕ್ಷಣಿಕ ಚುಟುವಟಿಕೆಗೆ ತೊಂದರೆಯಾಗಲಿದೆ. ಆದ್ದರಿಂದ ಈ ಕೇಂದ್ರವನ್ನು ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಹೊರತು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು NSUI ಕಾರ್ಯಕರ್ತರು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಬಾಲಾಜಿ, ಜಿಲ್ಲಾ ಕಾರ್ಯಾಧ್ಯಕ್ಷ ರವಿ ಕಾಟಿಕೆರೆ, ನಗರಾಧ್ಯಕ್ಷ ವಿಜಯ್‍,  ಮುಖಂಡರಾದ ಮಧುಸೂದನ್, ವಿಶ್ವನಾಥ ಕಾಶಿ, ಪ್ರಮುಖರಾದ ವಿಜಯ್, ವಿನಯ್, ರವಿ, ಮನು, ಚಂದ್ರೋಜಿರಾವ್, ಆಲ್ವಿನ್, ಕಿರಣ್, ಸಂದೇಶ್, ಮಂಜು ಸೇರಿದಂತೆ ಹಲವರು ಇದ್ದರು.

ಕುಲಪತಿಗೆ ಮುತ್ತಿಗೆ ಹಾಕಿದ ವಿಡಿಯೋ ರಿಪೋರ್ಟ್

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment