ಶಿವಮೊಗ್ಗ ಲೈವ್.ಕಾಂ | SHIMOGA NEWS | 14 MAY 2021
ಸಚಿವ ಈಶ್ವರಪ್ಪ ಅವರು ಶಿವಮೊಗ್ಗ ಸಿಟಿಯಲ್ಲಿ ಘೋಷಿಸಿದ ಕಠಿಣ ಲಾಕ್ ಡೌನ್ ಎರಡನೆ ದಿನ ಮುಕ್ತಾಯವಾಗಿದೆ. ಆದರೆ ಸೋಂಕಿನ ಸಂಖ್ಯೆ ಇಳಿಕೆಯಾಗಿಲ್ಲ.
ಶಿವಮೊಗ್ಗ ಜಿಲ್ಲೆಯಾದ್ಯಂತ 720 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 209 ಮಂದಿ ಶಿವಮೊಗ್ಗ ತಾಲೂಕುನವರಾಗಿದ್ದಾರೆ. ಭದ್ರಾವತಿಯಲ್ಲಿ 103, ಶಿಕಾರಿಪುರದಲ್ಲಿ 41, ತೀರ್ಥಹಳ್ಳಿ 61, ಸೊರಬದಲ್ಲಿ 78, ಸಾಗರದಲ್ಲಿ 171, ಹೊಸನಗರದಲ್ಲಿ 31, ಇತರೆ ಜಿಲ್ಲೆಯಿಂದ ಬಂದಿರುವ 26 ಮಂದಿಗೆ ಸೋಂಕು ತಗುಲಿದೆ.
ಏಳು ಸಾವಿರ ಗಡಿ ದಾಟಿದ ಕೇಸ್
ಜಿಲ್ಲೆಯಲ್ಲಿ ದಿನೆ ದಿನೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಆಕ್ಟಿವ್ ಪ್ರಕರಣಗಳ ಸಂಖ್ಯೆಯ ಹೆಚ್ಚಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 7277 ಮಂದಿ ಸೋಂಕಿತರಿದ್ದಾರೆ. ಈ ಪೈಕಿ 4835 ಮಂದಿ ಹೋಂ ಐಸೊಲೇಷನ್ನಲ್ಲಿದ್ದಾರೆ. ಇನ್ನು, 577 ಮಂದಿ ಇವತ್ತು ಕರೋನದಿಂದ ಗುಣವಾಗಿದ್ದಾರೆ.
ಐವರು ಸಾವು
ಜಿಲ್ಲೆಯಲ್ಲಿ ಇವತ್ತು ಐವರು ಕರೋನ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಕೋವಿಡ್ನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 557ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]